ಅನಾತ ಹೆಣ್ಣು ಮಕ್ಕಳಿಗೆ ಅಂದಕಾರದ ಸಾಂಪ್ರದಾಯಕ ಉಟದಟ್ಟಿ ನೇರವೆರಿಸಿದ ಮಹಾಲಿಂಗಪೂರದ ಶಂಭುಲಿಂಗ ಬಡಗೇರ ಕುಟುಂಬ.
ಈಗಿನ ಕಾಲದಲ್ಲಿ ತಮ್ಮ ತಮ್ಮ ಮಕ್ಕಳಿಗೆ ದೊಡ್ಡಸ್ತಿಕೆ ಡೌಲತ್ತು ತೋರಿಸಲು ಲಕ್ಷಾಂತರ ಖರ್ಚು ಮಾಡಿ ಹುಟ್ಟು ಹಬ್ಬ ಮದುವೆ ಅಂತಾ ಖಾಸಗಿ ಕಾರ್ಯಗಳನ್ನು ಮಾಡುವ ಜನರ ಮದ್ಯ ಮಹಾಲಿಂಗಪುರ ಪಟ್ಟಣದ ಶಂಭುಲಿಂಗ ಬಡಗೇರ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಉಟದಟ್ಟಿ ಕಾರ್ಯಕ್ರಮವನ್ನು ಅನಾಥ ಹೆಣ್ಣು ಮಕ್ಕಳ ಜೊತೆ ಮಾಡಿ ಮಾನವೀಯತೆಯ ಮತ್ತೊಂದು ಹೆಜ್ಜೆ ಮುಂದಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಾರಣ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ದೇವರ ಸ್ಥಾನ ಕೊಟ್ಟು ಪೂಜಿಸುವ ಸಾಂಪ್ರದಾಯಿಕ ದೇಶ ಅಂದರೆ ಅದುವೆ ಭಾರತ ಅದರಂತೆ ಹೆಣ್ಣು ಮಕ್ಕಳು ಬೆಳೆದಂತೆ ಅವರ ವೈಯಕ್ತಿಕ ಜೀವನದಲ್ಲಿ ದೈಹಿಕವಾದ ಬದಲಾವಣೆಗಳಿಗೆ ತಕ್ಕಂತೆ ಉಡುಗೆ ತೊಡುಗೆ ತೊಡಿಸಿ ಮನೆಯಲ್ಲಿಯೆ ಆಚರಣೆ ಮಾಡಿವ ಕೆಲವು ಪದ್ದತಿಗಳು ಈಗ ಊರ ಮಂದಿಗೆ ಊಟ ಹಾಕಿಸಿ ಆಚರಣೆ ಆಗುತ್ತಿವೆ ಇದರ ಮದ್ಯ ಶಂಭುಲಿಂಗ ಬಡಿಗೇರ ಎಂಬುವರ ಇಬ್ಬರು ಗೌರಿ ಮತ್ತು ಸನ್ನಿದಿ ಹೆಣ್ಣು ಮಕ್ಕಳ ಉಟದಟ್ಟಿ ಕಾರ್ಯಕ್ರಮವನ್ನು ದುಂದು ವೆಚ್ಚ ಮಾಡದೆ ಮುಧೋಳದ ವಿಜಯ ಅನಾಥಾಶ್ರಮದ ಎಂಟು ಹೆಣ್ಣು ಮಕ್ಕಳ ಜೊತೆ ತಮ್ಮ ಮಕ್ಕಳ ವೈಯಕ್ತಿಕ ಸಾಂಪ್ರದಾಯಿಕ ಉಟದಟ್ಟಿ ಕಾರ್ಯಮ ಮಾಡಿ ಮಾನವೀಯತೆ ಮೆರೆದಿದ್ದಾರೆ.
( ಉಟದಟ್ಟಿ ಅಂದರೆ )
ಹೆಣ್ಣು ಮಕ್ಕಳು ಬೆಳೆದು ಏಳು ವರ್ಷಕ್ಕೆ ಹನ್ನೊಂದು ವರ್ಷಕ್ಕೆ ಸೋದರ ಮಾವಂದಿರ ಅಥವಾ ತಾಯಿಯ ತವರು ಮನೆಯವ ಕಡೆಯಿಂದ ಸೀರೆ ತಂದು ಉಡಿಸುವುದೆ ಉಟದಟ್ಟಿ ಕಾರ್ಯಕ್ರಮ ಎನ್ನುವರು ಇದು ಹೆಣ್ಣು ಮಕ್ಕಳ ಶ್ರೇಷ್ಠ ದಿನವಾದ ದಿನವಾಗಿರುತ್ತದೆ.
ವರದಿ.
ಶಿವಶಂಕರ ಕಡಬಲ್ಲವರ
ರನ್ನಮುಧೋಳ