ಸಾರ್ವಜನಿಕರು/ಮತ್ತು ಸರ್ಕಾರಿ ಅಧಿಕಾರಿಗಳ ಗಮನಕ್ಕೆ
ವಿಷಯ : 2018 ರಿಂದ 2021 ರ ವರೆಗೆ ಛಲಗಾರ ವಾಹಿನಿಯ ವರದಿಗಾರರನ್ನು ಅಮಾನತ್ತು
ಮಾಡಿರುವ ಕುರಿತು.
ಮಾನ್ಯರೇ…..
ಛಲಗಾರ ವಾಹಿನಿಯ ಎಲ್ಲ ಹಿತೈಷಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಈ ಮೂಲಕ ತಿಳಿಸುವುದೆನೆಂದರೆ 2018 ರಿಂದ ದಿನಾಂಕ 11/08/2021 ರ ವರೆಗೆ ಛಲಗಾರ ವಾಹಿನಿಯ ಹೆಸರು ಹೆಳಿಕೊಂಡು ಕೆಲವು ವರದಿಗಾರರು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಕಾನೂನು ನಿಷೇದಿತ ಕೃತ್ಯ ಮಾಡುವ ವ್ಯಕ್ತಿಗಳಿಗೆ ಹೆದರಿಕೆ, ಬೆದರಿಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಮತ್ತು ಅದು ಅಲ್ಲದೆ ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ,ರಾಯಬಾಗ, ಅಥಣಿ, ಬಾಗಲಕೋಟ, ಜಮಖಂಡಿ, ರಬಕವಿ/ಬನಹಟ್ಟಿ, ಮುದೋಳ, ವಿಜಯಪೂರ, ಇಂಡಿ. ಚಡಚಣ, ಕೊಪ್ಪಳ, ಕುಷ್ಟಗಿ, ಇಲಕಲ್ ಬೆಂಗಳೂರು ಗ್ರಾಮೀಣ, ಸೆರಿದಂತೆ ಎಲ್ಲ ವರದಿಗಾರರನ್ನು ಈ ಕ್ಷಣದಿಂದ ಜಾರಿಗೆ ಬರುವಂತೆ ನಮ್ಮ ಸಂಸ್ಥೇಯಿಂದ ಅಮಾನತ್ತು ಮಾಡಲಾಗಿದೆ, ಅದರಂತೆ ಈ ಹಿಂದೆ ನಮ್ಮ ವಾಹಿನಿಯ ವರದಿಗಾರರೆಂದು ಗುರುತಿಸಿಕೊಂಡ ಯಾವುದೆ ವ್ಯಕ್ತಿ ಇನ್ನು ಮುಂದೆ ನಮ್ಮ ವಾಹಿನಿಯ ಲೋಗೋ ಬಳಸುವುದಾಗಲಿ, ಅಥವಾ ನಮ್ಮ ವಾಹಿನಿಯ ವರದಿಗಾರರೆಂದು ಗುರುತಿಸಿಕೊಳ್ಳುವುದಾಗಲಿ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಗುರುತಿಸಿಕೊಂಡದ್ದೆ ಆದಲ್ಲಿ ಹಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಮತ್ತು ಈ ಹಿಂದೆ ನಮ್ಮ ವಾಹಿನಿಯ ವರದಿಗಾರರೆಂದು ನಮ್ಮ ಸಂಸ್ಥೆಯಿಂದ ಪಡೆಯಲಾದ ಐಡಿ ಕಾರ್ಡ್ ಮತ್ತು ಲೋಗೋ ವನ್ನು ದಿನಾಂಕ 30/08/2021 ರ ಒಳಗೆ ಕಾರ್ಯಾಲಯಕ್ಕೆ ಹಿಂದಿರುಗಿಸಬೇಕೆಂದು ಈ ಮೂಲಕ ಸೂಚನೆ ನೀಡುತಿದ್ದೆವೆ, ಮತ್ತು ಸದರಿ ಪ್ರತಿಯನ್ನು ಸಂಬಂದಿತ ಎಲ್ಲ ಜಿಲ್ಲಾ ಮತ್ತು ತಾಲೂಕು ಕಛೇರಿಗಳಿಗೆ ಕಳುಹಿಸಿ ಕೊಡಲಾಗಿದೆ. ಇನ್ನೂ ಮುಂದೆ ಈ ಮೇಲೆ ತಿಳಿಸಿರುವ ಸ್ಥಳಗಳಲ್ಲಿ ಹೊಸ ವರದಿಗಾರರನ್ನು ನೇಮಿಸಲಾಗುವುದೆಂದು ಸ್ಪಷ್ಟಪಡಿಸುತಿದ್ದೆವೆ.
ಧನ್ಯವಾದಗಳೊಂದಿಗೆ
ಶ್ರೀ ಪ್ರಭಾಕರ ಹ ಗಗ್ಗರಿ
ಛಲಗಾರ ಟಿವ್ಹಿ ಮುಖ್ಯಸ್ಥರು ಬೆಳಗಾವಿ
ಕಚೇರಿ ವಿಳಾಸ: ಎಮ್ಐಜಿ,19 ಸಾನಿಕೊಪ್ಪ ಬಿಲ್ಡಿಂಗ್
ಕೆನರಾ ಬ್ಯಾಂಕ ಹತ್ತಿರ, ಮಹಾಂತೇಶ ನಗರ ಬೆಳಗಾವಿ
ಸಂಪರ್ಕ:9731650003