ಶ್ರೀ ಬಸಪ್ಪ ಹನಮಂತ ಮನಿಗಾರ ಅವರು ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಪಿಎಮ್ ಬುದ್ನಿ ಗ್ರಾಮದವರಾಗಿದ್ದು . ಅವರು ಸತತ 12 ವರ್ಷಗಳ ಕಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಅರಿತಿದ್ದಾರೆ, ಅವರು ಪ್ರಾಥಮಿಕ ಶಿಕ್ಷಣವನ್ನು ಬುದ್ನಿ ಪಿಎಮ್ ಗ್ರಾಮದಲ್ಲಿ ಮಾದ್ಯವಿಕ ಶಿಕ್ಷಣವನ್ನು ಪ್ರತಿಶಿಷ್ಠಿತ ಆರ್ ಎಮ್ ಜಿ ಸಂಯುಕ್ತ ಪದವಿಪೂರ್ವ ಮಹಾವಿಧ್ಯಾಲಯ ಹಾಗೂ ಪದವಿ ಶಿಕ್ಷಣವನ್ನು ಎಸ್.ಆರ್.ಕಂಠಿ ಮಹಾವಿಧ್ಯಾಲಯ ಮುದೋಳದಲ್ಲಿ ಪೂರೈಸಿ ಸ್ನಾತಕೋತ್ತರ ಸಮಾಜಕಾರ್ಯ ಶಿಕ್ಷಣವನ್ನು ಬಡ್ರ್ಸ್ ಸಮಾಜಕಾರ್ಯ ಮಹಾವಿಧ್ಯಾಲಯ ತುಕ್ಕಾನಟ್ಟಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದು ಮತ್ತು ಕಾನೂನು ಪದವಿಯನ್ನು ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಮಹಾವಿಧ್ಯಾಲಯ ಜಮಖಂಡಿಯಲ್ಲಿ ಪೂರೈಸಿದ್ದಾರೆ. ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ 2022 ಜೂನ್ 13 ರಂದು ನಡೆಯುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತಮ್ಮ ಪವಿತ್ರವಾದ ಪ್ರಥಮ ಪ್ರಾಶಸ್ತ್ಯೆದ ಮತವನ್ನು ನೀಡಿ ಅವರನ್ನು ಅಶೀರ್ವದಿಸಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಲು ವಿನಂತಿಸುತ್ತಾರೆ.