ಕಡಿಮೆ ಆಯುಸ್ಸಿನ ಅಣಬೆ ನಮ್ಮ ಧೀರ್ಘಾಯುಸ್ಸಿಗೆ ಉತ್ತಮವಾಗಿರು ಅಣಬೆ ಅಗ್ಯಾರಿಕೇಲಿಸ್ ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿವೆ. ಇದರಲ್ಲಿ ಸುಮಾರು ೧೨೫ ಜಾತಿಗಳೂ ೪000 ಪ್ರಭೇಧಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಇವು ಹೆಚ್ಚು ತೇವಾಂಶ ಮತ್ತು ಅದ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ.
ಅಣಬೆಗಳಲ್ಲಿ ತಿನ್ನುವ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಸ್ವಾಭಾವಿಕವಾಗಿ ಅಣಬೆಗಳು ವಿವಿಧ ಬಣ್ಣ ಮತ್ತು ರಚನೆಗಳನ್ನು ಹೊಂದಿರುತ್ತವೆ. ಆಗಾಗಿ ಅಣಬೆಗಳು ನನ್ನಲ್ಲಿ ಕುತೂಹಲ ಕೆರಳಿಸಿವೆ. ಅವುಗಳ ಈ ವಿಸ್ಮಯ ರೂಪವನ್ನು ಪ್ರಕೃತಿಯಲ್ಲಿ ನೋಡಲು ಬಹಳ ಸುಂದರ. ಆದರೆ ಕೆಲ ಅಣಬೆಗಳು ವಿಷಕಾರಕಗಳೆಂಬುದನ್ನು ಮರೆಯಬಾರದು. ಏಕೆಂದರೆ, ಬಹುತೇಕ ವರ್ಣರಂಜಿತ ಅಣಬೆಗಳು ವಿಷ ಅಣಬೆಗಳ ಗುಂಪಿಗೆ ಸೇರಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಬೆಳೆಯುವ ಅಣಬೆ ತಿನ್ನುವ ಅಣಬೆಯೆಂದು ಖಚಿತವಾಗಿ ತಿಳಿಯದಿದ್ದಲ್ಲಿ ಉಪಯೋಗಿಸಬಾರದು. ಹಾಗೆಂದು ವರ್ಣ ರಂಜಿತ ಅಣಬೆಗಳೆಲ್ಲ ವಿಷ ಅಣಬೆಗಳೆಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಜಾತಿಯ ಬಣ್ಣದ ಅಣಬೆಗಳು ಸಹ ಖಾದ್ಯ ಅಣಬೆಗಳಾಗಿವೆ.
ಕುಳ್ಳಣಬೆ: ಅಥವ ಉಲ್ಲಣಬೆ : ಇದು ನೋಡಲು ಬಹಳ ಸುಂದರವಾಗಿದ್ದರು ಹೆಚ್ಚು ಬೆಳೆಯುವುದಿಲ್ಲ. ಇದರ ತಲೆ ಅಂದೆ ಛತ್ರಿ ಬಹಳ ಅಗಲವಾಗಿ ಬೆಳೆಯುತ್ತದೆ. ಇದರ ಒಳ ನರುಗೆಗಳು ಶುಭ್ರವಾಗಿ ಸ್ಪಟಿಕದ ರೀತಿ ಹೊಳೆಯುತ್ತವೆ. ಇದು ಒಂದು ಅಥವ ಎರಡು ದಿನಗಳ ಕಾಲ ಮಾತ್ರ ಇರಲು ಸಾಧ್ಯ. ಆ ದಿನಗಳು ಮೀರಿದರೆ ಮೈ ತುಂಬಾ ಹುಳುಗಳು ಅದನ್ನು ಕೈ ಇಂದ ಮುಟ್ಟಲು ಸಾಧ್ಯವಿಲ್ಲ.
# ಬೇರಣಬೆ : ಇದು ಹೆಸರೇ ಹೇಳುವಂತೆ ಬೇರು ಬಹಳ ಉದ್ದ ಇರುತ್ತದೆ. ಮುಂಗಾರಿನ ಕಾಲದಲ್ಲಿ ಅದು ಹುತ್ತದ ಸಮೀಪ ಅಥವ ದೊಡ್ಡ ಉದಿಗಳ ಸಮೀಪ ಬೆಳೆಯುತ್ತವೆ. ಇದರ ತಲೆ ಮಾತ್ರ ತುಂಬಾ ಚಿಕ್ಕದು ಹಿಡಿ ಹಿಡಿದು ಮೇಲೆ ಹೆಳೆದರೆ ಸುಮಾರು ಅರ್ಧ ಮೀಟರ್ ನಷ್ಟು ಉದ್ದದ ಬೇರು ಇರುತ್ತವೆ. ಜೊತೆಗೆ ಇವು ಒಂದೇ ಜಾಗದಲ್ಲಿ ಗುಂಪು ಗುಂಪಾಗಿ ಬೆಳೆಯುತ್ತವೆ. ಇವು ಸ್ವಲ್ಪ ಗಟ್ಟಿಯು ಹೌದು. ಇವುಗಳ ತಲೆ ಗಿಂತ ಬೇರು ಉದ್ದ. ಈ ಬೇರಣಬೆ ಸಾಂಬರ್ ಮಾಡಿ ತಿನ್ನುತ್ತಿದ್ದರೆ ಬಾಯಲ್ಲಿ ಕರಮ್ ಕರಮ್ ಸೌಂಡ್ ಕೇಳುತ್ತದೆ ಬಹಳ ನುಣುಪಾಗಿ ಇರುತ್ತವೆ ಸಾಂಬಾರು ಕೂಡ ತುಂಬಾ ನೂಣುಪಾಗಿ ಇರುತ್ತದೆ. ಇದರ ರುಚಿಯು ತುಂಬಾ ಅದ್ಬುತ.
“ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಅಣಬೆಯಲ್ಲಿ ಇವೆ.ಕೆಲವು ಜಾತಿಯ ಅಣಬೆಗಳಲ್ಲಿ ಫೋಲಿಕ್ ಆಮ್ಲ ಹೆಚ್ಚಾಗಿರುವುದೆಂದು ತಿಳಿದುಬಂದಿದೆ. ಈ ಆಮ್ಲವನ್ನು ರಕ್ತ ಕ್ಷಯದಿಂದ ನರಳುವ ರೋಗಿಗಳಿಗೆ ಕೊಡುತ್ತಾರೆ. ೧೦೦-೨೦೦ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾಗುವಷ್ಟು ಪೌಷ್ಟಿಕಾಂಶವಿರುವುದೆಂದು (ಸುಮಾರು ೭೨%-೮೨% ಸಾರಜನಕ ಪ್ರೋಟೀನ್ ರೂಪದಲ್ಲಿದೆ) ಪ್ರಯೋಗಗಳಿಂದ ತಿಳಿದು ಬಂದಿದೆ.”
# ವಿಟಮಿನ್ _ ಬಿ2:ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಇದು ಹೆಚ್ಚು ಅಗತ್ಯ.
ರೋಗನಿರೋಧಕ ಶಕ್ತಿ: ಎರ್ಗೊಥಿಯಾನೈನ್ ಎಂಬ ಅತಿ ಶಕ್ತಿಯುತ ಆಂಟಿ ಯಾಕ್ಸಿಡಂಟ್ ಇದರಲ್ಲಿರುವದರಿಂದ ರೋಗಗಳಿಂದ ದೂರವಿರಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಇದರಲ್ಲಿನ ಆಂಟಿ ಬಯಾಟಿಕ್ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.
ತಾಜಾ ಅಣಬೆಯಲ್ಲಿ ಶೇ.3-7 ಮತ್ತು ಒಣ ಅಣಬೆಯಲ್ಲಿ ಶೇ.25-40 ರಷ್ಟು ಪ್ರೋಟೀನ್ ಇದೆ. ಹಣ್ಣು ಮತ್ತು ತರಕಾರಿಗಳಿಗಿಂತಲೂ ಹೆಚ್ಚಿನ ಪ್ರೋಟೀನ್ ಹೊಂದಿರುತ್ತದೆ. ವಿಟಮಿನ್ ಡಿ ಜೀವಸತ್ವ ಇರುವ ಏಕೈಕ ಸಸ್ಯಹಾರಿ ಮೂಲ ಅಣಬೆ. ತರಕಾರಿ ಮತ್ತು ಮಾಂಸಕ್ಕೆ ಹೋಲಿಸಿದರೆ ಹೆಚ್ಚಿನ ಕಬ್ಬಿಣಾಂಶ ಇದೆ. ಕೊಬ್ಬಿನಾಂಶ ಮತ್ತು ಕ್ಯಾಲೊರಿ ಪ್ರಮಾಣ ಕಡಿಮೆ ಹೊಂದಿರುವುದರಿಂದ ಮಧುಮೇಹ ಮತ್ತು ಹೃದ್ರೋಗಿಗಳೂ ಬಳಕೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ಮಾತ್ರ ವೀಕ್ಷಣೆ ಮಾಡಬಹುದಾಗಿದೆ. ಇತ್ತೀಚೆಗೆ ಅನೇಕ ರೀತಿಯ ಅಣಬೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಗುಳಿಗೆ, ಕ್ಯಾಪ್ಸೂಲ್ ಮತ್ತು ಸಿರಪ್ಗಳ ರೂಪದಲ್ಲಿ ಮಾರುಕಟ್ಟೆಯನ್ನು ಹೇರಿ ಮಾರಾಟ ಮಾಡಲಾಗುತ್ತಿದೆ. 1991 ರಲ್ಲಿ ಜಗತ್ತಿನ ಅಣಬೆ ಉತ್ಪತ್ತಿಯನ್ನು ಮೌಲ್ಯವನ್ನು 8.5 ಬಿಲಿಯನ್ ಡಾಲರುಗಳಷ್ಟು ಅಂದಾಜು ಮಾಡಲಾಗಿದ್ದು, ಅದೇ ವರ್ಷ 1.2 ಬಿಲಿಯನ್ ಡಾಲರ್ಗಳಷ್ಟು ಔಷಧಿಯ ಅಣಬೆಗಳಿಂದಲೇ ಉತ್ಪತ್ತಿಯಾಗಿದೆಯೆಂದೂ ಸಹ ಅಂದಾಜು ಮಾಡಲಾಗಿದೆ. ನಾವುಗಳು ಕೃತಕವಾಗಿ ಬೆಳೆದರೂ ನೈಸರ್ಗಿಕ ಅಣಬೆಗಳಿಗೆ ಸಾಟಿಯಿಲ್ಲ.
ಇಂತ ಆಹಾರಗಳನ್ನು ತಿನ್ನುವುದನ್ನು ಬಿಟ್ಟು ತಿನ್ನಬಾರದನ್ನ ತಿಂದು ಮೈ ತುಂಬಾ ರೋಗಗಳನ್ನು ಅಂಟಿಸಿಕೊಂಡು ನೆರಳಾಡುವುದನ್ನ ಬಿಟ್ಟು, ನಮ್ಮ ಪ್ರಕೃತಿ ದತ್ತವಾಗಿ ಸಿಗುವ ಅಯಾ ಪ್ರದೇಶಗಳಿಗೆ ಅನುಗುಣವಾಗಿ ಆಹಾರ ಪದ್ದತಿಯನ್ನು ನಮ್ಮ ಹಿರಿಕರು ಅಳವಡಿಸಿಕೊಂಡು ಸಂಬೃದ್ಧವಾದ ನೂರು ವರ್ಷಗಳ ಕಾಲ ಬಾಳಿ ಬದುಕಿ ತೋರಿಸಿಕೊಟ್ಟಿದ್ದಾರೆ.