ಲಂಚಕ್ಕಾಗಿ ಬಾಯಿತೆಗೆದು ಜೈಲು ಸೇರಿದ ಸರ್ಕಾರಿ ಅಧಿಕಾರಿ.
ನಿಮಗೆಲ್ಲ ಆಶ್ಚರ್ಯವೆನಿಸಿದರೂ ಸರ್ಕಾರಿ ಅಧಿಕಾರಿಗಳು ಹಾಕುವ ಚಪ್ಪಲಿಯಿಂದ ಹಿಡಿದು ಅವರ ಹೆಂಡತಿ ಮಕ್ಕಳು ತಿನ್ನುವ ಅಣ್ಣದಿಂದ ಹಿಡಿದು ಹಾಕುವ ಬಟ್ಟೆ ಒಡವೆ ಕೂಡ ಶ್ರಮಜೀವಿ ಜನಸಾಮಾನ್ಯರ ಬೇವರಿನ ಹಣವನ್ನು ವಂಚಿಸಿ ಲಂಚ ಪಡೆದ ಹಣದಿಂದಲೇ ಎಂಬುವುದು ಅತ್ಯಂತ ಕಟು ಸತ್ಯ.
ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ಅಧಿಕಾರಿ ಸರ್ಕಾರ ಸಾವಿರಾರು ರೂಪಾಯಿ ಸಂಬಳ ನೀಡಿದರು ಲಂಚ ಅನ್ನುವ ಹೆಸಿಗೆಗೆ ಬಾಯಿ ಹಾಕಿ ಈಗಾಗಲೇ ಜೈಲು ಸೇರಿದ್ದಾನೆ.
ಇದಿಗ ಲಂಚ ಪಡೆದ ಅಧಿಕಾರಿ ಬೆಳಗಾವಿಯ ಇಂಡಲಗಾ ಜೈಲು ಸೇರಿದ್ದಾನೆ. ಕೇವಲ ಇದು ಒಬ್ಬ ಇಂಜಿನಿಯರ್ ಒಬ್ಬನ ಕಥೆಯಲ್ಲ , ಗ್ರಾಮ ಪಂಚಾಯತಿ ಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಗುತ್ತಿಗೆ ಕೆಲಸ ಮಾಡಿದ ಗುತ್ತಿಗೆದಾರರ ಹಣೆ ಬರಹವೆ ಅಷ್ಟೇ. ದಿನ ಬೆಳಗಾದರೆ ಸಾಲ ಸೂಲ ಮಾಡಿ ಹಣ ಹೊಂದಿಸುವುದು ಒಂದು ಕಡೆಯಾದರೆ , ಕೆಲಸಗಾರರಿಗೆ ಅಪ್ಪ ಅಣ್ಣ ಅಂದು ಕೆಲಸ ಮಾಡಿಸಬೇಕು. ಇದರ ಮದ್ಯ ಎಸ್ ಡಿ ಎಮ್ ಸಿ ಸದಸ್ಯರಿಂದು ಎದೆ ಸಿಳಿದರೆ ಎರಡಕ್ಷರ ಇರದ ನಕಲಿ ಪತ್ರಕರ್ತರಿಗೂ ಕೂಡ ಕಮಿಷನ್ ನೀಡಬೇಕು. ಇಲ್ಲವಾದರೆ ಅಂತಹ ಕಾಮಗಾರಿಗಳ ವಿರುದ್ಧ ಆರ್ ಟಿ ಐ ವಿಚಾರಣೆ ಹೆಸರಲ್ಲಿ ತೊಂದರೆಗೆ ಸಂಚಕಾರ ರೂಪಗೊಳ್ಳುತ್ತದೆ. ಒಂದು ವೇಳೆ ಇವೆಲ್ಲರಿಂದ ಪಾರಾದರು ಈ ನಿಚ ಅಧಿಕಾರಿಗಳಿಂದ ಪಾರಾಗುವುದು ತುಂಬಾ ಕಠಿಣವಾದ ಕೆಲಸ,
ಸದ್ಯ ರಾಯಬಾಗ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಕಾಮಗಾರಿ ಬಿಲ್ ಮಂಜೂರು ಮಾಡಲು ಗುತ್ತಿಗೆದಾರನ ಬಳಿ 12000 ಲಂಚದ ಹಣ ಪಡೆಯುತ್ತಿದ್ದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಜ್ಯೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ!
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ರಾಯಬಾಗ ಸೆಕ್ಸನ್ ಜ್ಯೂನಿಯರ್ ಇಂಜಿನಿಯರ್ ಪಂಡಿತ ಟಿ ವಾಘ ನಿಚನೊಬ್ಬ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದ ಅಧಿಕಾರಿ. ಗುತ್ತಿಗೆದಾರ ಮುತ್ತಪ್ಪ ಲಕ್ಷ್ಮಣ ಭಜಂತ್ರಿ ಎಂಬುವರು ಪಂಚಾಯತ್ ರಾಜ್ ಇಲಾಖೆಯಿಂದ 3 ಲಕ್ಷ ವೆಚ್ಚದಲ್ಲಿ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಖೇತಗೌಡರ ತೋಟ, ಮುಗಳಖೋಡದ ಶಾಲೆಯ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಮುಕ್ತಾಯಗೊಳಿಸಿದ್ದರು.
ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಕಾಮಗಾರಿಯ ಬಗ್ಗೆ ಅಳತೆಯನ್ನು (ಎಂಬಿ) ದಾಖಲಿಸಿಕೊಂಡು ಬಿಲ್ ತಯಾರಿಸಿ ಕೊಡಲು ಹಾಗೂ ಬಿಲ್ಗೆ ಸಹಿ ಮಾಡಲು ಶೇ.5ರಷ್ಟು ಅಂದರೆ ₹12 ಸಾವಿರ ಲಂಚ ನೀಡಲು ತಿಳಿಸಿದ್ದರು. ಇದರಿಂದ ಬೇಸತ್ತ ಗುತ್ತಿಗೆದಾರ ಮುತ್ತಪ್ಪಾ ಭಜಂತ್ರಿ ಲೋಕಾಯುಕ್ತ ಠಾಣೆಗೆ ತೆರಳಿ ಈ ಕುರಿತು ದೂರು ನೀಡಿದ್ದರು. ಈ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನಮಂತರಾಯ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಭರತ ರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ನಿರಂಜನ ಪಾಟೀಲ, ಯು.ಎಸ್. ಅವಟಿ ಮತ್ತು ರವಿಕುಮಾರ ಧರ್ಮಟ್ಟಿ ಹಾಗೂ ಸಿಬ್ಬಂದಿ ರವಿ ಮಾವರಕರ, ವಿ ಬಿ ಬಸಕ್ರಿ, ರಾಜಶ್ರೀ ಭೋಸಲೆ, ಆರ್.ಬಿ.ಗೋಕಾಕ, ಸಂತೋಷ ಬೆಡಗ, ಗಿರೀಶ ಪಾಟೀಲ, ಬಸವರಾಜ ಕೊಡೊಳ್ಳಿ, ಅಭಿಜಿತ ಜಮಖಂಡಿ ದಾಳಿ ನಡೆಸಿದ್ದಾರೆ. ಈ ಲೋಕಾಯುಕ್ತ ಅಧಿಕಾರಿಗಳಿಗೆ ನಮ್ಮ ಛಲಗಾರ ಟಿವಿ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.