ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿನ ಪ್ರಕರಣಕ್ಕೆ ಸಂಬಂಧ ದೃಶ್ಯಾವಳಿಯಂತೆ 13 ಜನರನ್ನು ಬಂಧಿಸಲಾಗಿದೆ. ಉಳಿದವರನ್ನೂ ಗುರ್ತಿಸಿ ಕಾನೂನು ಪ್ರಕ್ರಿಯೆ ನಡೆದಿದೆ.
ಶಿಕ್ಷಕನೋರ್ವರ ಮೇಲೆ ಆದ ಹಲ್ಲೆಗೆ ಸಂಬಂಧ ಇಬ್ಬರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಿಪಡಿಸಿದೆ. ಇನ್ನೂ ಮೂವರನ್ನು ಗುರ್ತಿಸಿದ್ದು, ಅವರ ಮೇಲೆ ಅಗತ್ಯ ಕಾನೂನಿಗೊಳಡಿಸಲಾಗುವದು.
ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ಅದರ ವಿರುದ್ಧ ಪ್ರತಿಭಟನೆ ಹೀಗೆ ಬನಹಟ್ಟಿ ಶಹರದಲ್ಲಿ ನಡೆಯುತ್ತಿರುವದರಿಂದ 144 ಕಲಂ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಜನತೆ ಇದಕ್ಕೆ ಸಹಕರಿಸಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು.
ಬನಹಟ್ಟಿ ಪಟ್ಟಣವು ಶಾಂತಿ ಸುವ್ಯವಸ್ಥೆಯಲ್ಲಿತ್ತು. ಹೊರಗಡೆಯಿಂದ ಕೆಲ ಕಿಡಿಗೇಡಿಗಳು ಶಾಂತಿ-ಸುವ್ಯವಸ್ಥೆ ಕೆಲಸವಾಗಬಾರದು.
ವಿದ್ಯಾರ್ಥಿಗಳ ಕಲ್ಲು ತೂರಾಟದ ಎರಡೂ ಕಡೆಯಿಂದ ವಿಡಿಯೋ ಚಿತ್ರೀಕರಣದಿಂದ ತಿಳಿದು ಬಂದಿವೆ. ಈ ರೀತಿ ಕ್ರಿಮಿನಲ್ ಘಟನೆಗಳಿಗೆ ಅವಕಾಶ ಕಲ್ಪಿಸದೆ ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯತ್ತ ಗಮನಹರಿಸಬೇಕು.
ಒಂದು ವೇಳೆ ಇಂತಹ ಕ್ರಿಮಿನಲ್ ಮೊಕದಮ್ಮೆ ದಾಖಲಾದರೆ, ಭವಿಷ್ಯವೇ ಹಾಳಾಗುವ ಮೂಲಕ ಉದ್ಯೋಗ, ನೌಕರಿಯಿಲ್ಲದೆ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಬದಲಾಗಿ ಉತ್ತಮ ಶಿಕ್ಷಣ ಪಡೆದುಕೊಂಡು ಜಾಣರಾಗಬೇಕೆಂದು ಜಗಲಾಸರ ತಿಳಿ ಹೇಳಿದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ