-
ಹಾವೇರಿ : ನಾವು ಭಾರತೀಯರು ಒಂದು ಟವರ್ ಮೇಲೆ ಧ್ವಜ ಹಾರಿಸಿದಕ್ಕೆ ನಿಮಗೆ ಉರಿಯುತ್ತೆ, ನಮಗಿಂತ ದೊಡ್ಡ ಧ್ವಜ ಹಾರಿಸಿದ್ರೆ ಬಹಳ ದೊಡ್ಡವರಾದ್ರಾ? ನಾವು ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ನಿಮ್ಮಂಪ್ಪಂಗೆ ಹುಟ್ಟಿದ್ರೆ ಅಲ್ಲಿ ಹೋಗಿ ಧ್ವಜ ಹಾರಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
-
ಈ ಮೂಲಕ ಹಾವೇರಿಯ ಗಣೇಶ ಪೆಂಡಾಲ್ ಪಕ್ಕ ಭಗವಾದ್ವಜ ಹಾರಿಸಿದ ಟವರ್ ಮೇಲೆ ಇಸ್ಲಾಂ ಧ್ವಜ ಹಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಹಾವೇರಿ ಸುಭಾಷ್ ಸರ್ಕಲ್ ವೃತ್ತದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಿನ್ನುವ ಅನ್ನ ಭಾರತದ್ದು, ಕುಡಿಯುವ ನೀರು ಭಾರತದ್ದು, ಮತ್ತೆ ಪಾಕಿಸ್ತಾನಕ್ಕೆ ಜೈ ಅಂತಿರಲ್ಲ ಯಾರಿಗೆ ಹುಟ್ಟಿದೀರಾ ಎಂದು ಪ್ರಶ್ನಿಸಿದರು.
-
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾವೇರಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಗವಾಧ್ವಜ ಹಾರಿಸುವುದನ್ನು ವಿರೋಧಿಸಿದವರಿಗೆ ಕಿಡಿಕಾರಿದ್ದಾರೆ. ನಾವು ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದೇವೆ, ನೀವು ಅಲ್ಲೋಗಿ ಧ್ವಜ ಹಾರಿಸಿ ನೋಡೋಣ ಎಂದಿದ್ದಾರೆ. ಅದಲ್ಲದೇ ಗಣೇಶ ಉತ್ಸವ ಆಚರಿಸಲು ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇದು ಪಾಕಿಸ್ತಾನವಾ? ಭಾರತವಾ? ಎಂದು ಪ್ರಶ್ನಿಸಿದರು.
-
ಇವತ್ತಿನ ಹಾವೇರಿ ಬೃಹತ್ ಸಭೆ ನೋಡಿದರೆ ಸನಾತನ ಧರ್ಮದ ಜಾಗೃತಿಯ ಅರಿವಾಗುತ್ತದೆ.ಆದ್ರೆ ಇಂದು ಅನೇಕ ಸ್ವಾಮೀಜಿಗಳು ಮಂತ್ರಿಗಳ ಮನೆ ಸುತ್ತುವ ಕೆಲಸ ಮಾಡುತ್ತಿದ್ದಾರೆ ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್ ಕಟ್ಟಿಸಿಕೊಳ್ಳಲು ಓಡಾಡುತ್ತಿದ್ದಾರೆ ಎಂದರು.ಧರ್ಮ ಉಳಿಸುವ ಕೆಲಸ ಮಾಡಬೇಕಾದವರು. ಮಂತ್ರಿ ಮಾಡಿ ಮುಖ್ಯಮಂತ್ರಿ ಮಾಡಿ ಅಂತಾ ಲಾಬಿ ಮಾಡುತ್ತಿದ್ದಾರೆ.ಗುರುಲಿಂಗ ಸ್ವಾಮೀಜಿಯವರ ಮಾತನ್ನು ಕೇಳಿದರೆ ಸನಾತನ ಧರ್ಮದ ಬಗ್ಗೆ ನಿಜವಾಗಲೂ ಗೌರವ ಮೂಡುತ್ತದೆ. ಸ್ವಾಮೀಜಿಗಳ ಕೆಲಸ ಸನಾತನ ಧರ್ಮ ಉಳಿಸುವ ಕೆಲಸ ಆಗಬೇಕು. ಆದ್ರೆ ಸನಾತನ ಧರ್ಮ ಉಳಿಸುವ ಕೆಲಸ ಮಾಡುತ್ತಿಲ್ಲ. ನಮ್ಮ ದೇಶವನ್ನು ಭಾರತ ಎಂದು ಕರೆದರೆ ಕೆಲವರಿಗೆ ನೋವಾಗುತ್ತದೆ. ಭರತದಿಂದ ಭಾರತ ಆಗಿದೆ ಇಂಡಿಯಾ ಅಂತಾ ಇಟ್ಟವರು ಬ್ರಿಟಿಷರು, ನೀವು ಭಾರತೀಯರಾ? ಅಥವಾ ಬ್ರಿಟಿಷರಿಗೆ ಹುಟ್ಟಿದೀರಾ? ಎಂದು ಕೇಳಿದರು.