ಬುಧವಾರ ದಿನಾಂಕ 04-01-2023 ರಂದು ಬೆಳಿಗ್ಗೆ 11 ಘಂಟೆಗೆ ಇಂಡಿಯನ್ನ್ ಎಕ್ಷ್ಪ್ರೇಸ್ ಬಳಿ, ಅಂಬೇಡ್ಕರ್ ವಿಧಿ , ಬೆಂಗಳೂರು ಇಲ್ಲಿ ಮೂಲನಿವಾಸಿಗಳ ಸಭೆ ಕರೆಯಲಾಗಿತ್ತು. ನಮ್ಮ ನಡೆ ಶಿಕ್ಷಣದ ಕಡೆ ಎಂಬ ಎಂಬ ದ್ಯೇಯವ್ಯಾಖ್ಯೆಯೊಂದಿಗೆ ಕಳೆದ 23 ವಾರಗಳಿಂದ ಮೂಲನಿವಾಸಿಗಳ 23 ಗೂಗಲ್ ಮಿಟಿಂಗ್ ಮಾಡಿ, ಮೂಲನಿವಾಸಿಗಳ ಮಕ್ಕಳ ಭವಿವಷ್ಯಕ್ಕಾಗಿ ದಿನದ ಒಂದೆರಡು ಗಂಡೆ ಸಮಯದಲ್ಲಿ ಬಿಡುವ ಮಾಡಿಕೊಂಡು ಸೇವೆ ಸಲ್ಲಿಸಬಯಸುವ ಸ್ವಯಂ ಸೇವಕರ ದಂಡು ಕಟ್ಟುವ ದಿಶೆಯಲ್ಲಿ ಈ ಮೀಟಿಂಗ್ ಕರೆಯಲಾಗಿತ್ತು. ಕೇರಿ, ಊರು, ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದ ಪ್ರಚಾರಕ್ಕಾಗಿ ಕಾರ್ಯನಿರ್ವಹಿಸುವ ಮೂಲನಿವಾಸಿ ಸಮುದಾಯಗಳ ಅಭಿವೃದ್ಧಿಗೆ ನಿಸ್ವಾರ್ಥ ಸೇವಾ ಮಾಡುವ ನಿರ್ಧಾರಕ್ಕಾಗಿ ಸಂಕಲ್ಪ ಮಾಡಲಾಯಿತು. ಅದರಂತೆ ಸರ್ವ ಸದಸ್ಯರ ಒಮ್ಮತದ ಮೇರೆಗೆ ಈ ಸಮೂಹಕ್ಕೆ “ಮೂಲನಿವಾಸಿಗಳ ಸಂರಕ್ಷಣಾ ಸಮಿತಿ” ಎಂದು ನಾಮಕರಣ ಮಾಡಲಾಯಿತು. ಈ ಸಮಿತಿಯಲ್ಲಿ ಹಲವಾರು ಸದಸ್ಯರು ಸ್ವಯಂ ಪ್ರೇರಿತವಾಗಿ ಸಭೆಗೆ ಸೇರಿದ್ದರು. ಹಾಗೂ ಸಭೆಯಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕರ್ನಾಟಕ ರಾಜ್ಯದ ಮೂಲನಿವಾಸಿಗಳು ಶೈಕ್ಷಣಿಕ, ಸಾಮಾಜಿಕ , ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅತಿ ಹಿಂದೂಳಿದಿರುವ ಕಾರಣ ಮೂಲ ನಿವಾಸಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದು. ಕೇಂದ್ರ ಮತ್ತು ರಾಜ್ಯ ಸರ್ಖಾರಗಳು ಮತ್ತು ಮೂಲನಿವಾಸಿ ಸಮುದಾಯಗಳ ಸೇತುವೆಯಾಗಿ ಕಾರ್ಯನಿರ್ವಹಿಸುವುದು.ಮೂಲನಿವಾಸಿ ವರ್ಗಗಳಿಗೆ ಒಳಪಡುವ ಎಲ್ಲ ಪರಿವಾರ ಮತ್ತು ಜಾತಿಗಳೊಡನೆ ಒಗ್ಗಟ್ಟಾಗಿ ಜಾಗೃತಿ ಮೂಡಿಸುವುದು. ಮೂಲನಿವಾಸಿಗಳನ್ನು ಶೈಕ್ಷಣಿಕ ವಲಯದಲ್ಲಿ ಸಬಲೀಕರಣಗೊಳಿಸಲು ಶಾಲಾ- ಕಾಲೇಜುಗಳ ಸ್ಥಾಪನೆ. ಸುದ್ದಿವಾಹಿನಿ, ಪತ್ರಿಕೆಗಳ ಹಾಗೂ ಆಪ್ ಪ್ರಾರಂಭಕ್ಕೆ ಪಯತ್ನ . ಆರ್ಥಿಕ ಚಟುವಟಿಕೆಗಳನ್ನು ಪ್ರೇರೇಪಿಸಲು, ಸಹಕಾರ ಸಂಘ , ಬ್ಯಾಂಕ್ ಗಳನ್ನು ಸ್ಥಾಪಿಸುವುದು. ಮೂಲನಿವಾಸಿಗಳ ಕಲ್ಯಾಣಕ್ಕಾಗಿ, ಕಾಲಕಾಲಕ್ಕೆ ಸರ್ವಸದಸ್ಯರ ಸಭೆಯಲ್ಲಿ ಅನುಮೋದಿಸಲು ಪಡುವ ಕಾಲೋಚಿತವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವುದಾಗಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಅದರಂತೆ ಪ್ರಸ್ತುತ ಕಾರ್ಯಕಾರಿ ಸಮಿತಿಗೆ ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆ ಕೂಡ ನಡೆಯಲಾಯಿತು. ರಾಜ್ಯ ಅದ್ಯಕ್ಷರು, ಜೆ ಸಿ ಪ್ರಕಾಶ , ಉಪಾದ್ಯಕ್ಷರಾಗಿ. ಜೆ ಪಿ ಪ್ರಕಾಶ ಮತ್ತು ವಿ ಶ್ರೀನಿವಾಸ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ ಎಚ್ ಗಗ್ಗರಿ , ರಾಜ್ಯ ಸಂಘಟನಾ ಸಂಚಾಲಕ, ಆಲಗೂಡು ಲಿಂಗರಾಜು , ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಹರೀಶ ಬಾಬು. ಎಮ್ ಎಸ್ ನಾಗರಾಜ . ರಾಮನಾರಾಯಣ. ಮೈಸೂರು ಜಿಲ್ಲಾದ್ಯಕ್ಷರಾಗಿ, ಸತೀಶ . ಬೆಂಗಳೂರು ಸೌಥ್ ಜಿಲ್ಲಾದ್ಯಕ್ಷರಾಗಿ, ಪ್ರವೀಣ ಆರ್. ಬೆಳಗಾವಿ ಜಿಲ್ಲಾದ್ಯಕ್ಷರಾಗಿ, ವiಹಾಂತೇಶ ಎಮ್.(ಹುಕ್ಕೇರಿ). ಧಾರವಾಡ ಜಿಲ್ಲಾದ್ಯಕ್ಷರಾಗಿ, ನಿಂಗಪ್ಪ ಹರಿಜನ. ಎಂಬುವವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.