ಪರೀಕ್ಷಾ ಸಮಯದಲ್ಲಿ ಕಬ್ಬು ಕಟಾವು ( ರೈತ ಕಾರ್ಮಿಕ ಗ್ಯಾಂಗ್ ) ಡಿಜೆ ಸೌಂಡ್ ಹಚ್ಚಿ ಯುವತಿಯರಿಂದ ಡ್ಯಾನ್ಸ್ ಮಾಡಿಸಿ ಸದ್ದು ಮಾಡಿ ಮಕ್ಕಳ ವಿಧ್ಯಾಭ್ಯಾಸ ಹಾಳಾಗುವಂತೆ ಮಾಡಿದ ಘಟನೆ .
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ
ಬಿಸನಾಳ – ಕೇಸಗೋಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುಮಾರು ಎಂಟು ಗಂಟೆಗೆ ಗ್ರಾಮಗಳ ಮದ್ಯ ಭಾಗದಲ್ಲಿ ಕಬ್ಬು ಕಟಾವು ಹಂಗಾಮು ಮುಕ್ತಾಯ ಗೋಳಸಿದ ರೈತ ಕಾರ್ಮಿಕ ಕಬ್ಬಿನ ಗ್ಯಾಂಗ್ ( ಡಿಜೆ ) ಸೌಂಡ್ ಹಚ್ಚುವುದಲ್ಲದೆ ಅಮಾಯಕ ಯುವತಿಯರಿಂದ ಡ್ಯಾನ್ಸ್ ಮಾಡಿಸಿ ಸಾರ್ವಜನಿಕರ ಶಾಂತಿಗೆ ದಕ್ಕೆ ತರುವುದಲ್ಲದೆ ಈ ತಿಂಗಳ SSLC ಪರೀಕ್ಷೆ .ಪ್ರಾಥಮಿಕ.ಪ್ರೌಡ ಶಾಲೆ ಪರೀಕ್ಷೆ. ಇನ್ನೂ ಅನೇಕ ವಿದ್ಯಾ ಹಂತದ ಪರೀಕ್ಷೆ ಬರೆಯುವ ಮಕ್ಕಳು ಓದುವ ಸಮಯದಲ್ಲಿ ತೊಂದರೆಯುಂಟು ಮಾಡುವ ಸೌಂಡ್ ಹಚ್ಚಿ ಕುಣಿದ ರೈತ್ ಕಾರ್ಮಿಕರು ಇದಷ್ಟೆ ಅಲ್ಲದೆ ಟ್ರ್ಯಾಕ್ಟರ್ ಟ್ರೈಲಿಯಲ್ಲಿ ಇಬ್ಬರು ಯುವತಿಯರ ಮೂಲಕ ಅಶ್ಲೀಲ ಜಾನಪದ ಹಾಡುಗಳನ್ನು ಹಚ್ಚಿ ಡ್ಯಾನ್ಸ್ ಮಾಡಿಸಿದ ಘಟನೆ ನಡೆದಿದೆ ಇದು ಲಕ್ಷಾಂತರ ಮಕ್ಕಳು ಓದಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿಯಾದರು ಯಾರು ಕೊಟ್ಟರು..? ಇದು ಪ್ರಜ್ಞಾವಂತರು ಕೇಳುವ ಪ್ರಶ್ನೆಗೆ ಉತ್ತರ ನೀಡುವವರು ಯಾರು…? ಮೊದಲೇ ಮೂರು ವರ್ಷಗಳಿಂದ ಕೋರೊನಾ ಮಹಾಮಾರಿ ಲಾಕ್ ಡೌನ್ ನಿಂದ ಮಕ್ಕಳ ವಿದ್ಯಾಭ್ಯಾಸ ಹದಗೆಟ್ಟು ಹೋಗಿದೆ ಇದರ ಮದ್ಯ ಶಬ್ದ ಮಾಲಿನ್ಯಕ್ಕೆ ಮತ್ತು ಸಾರ್ವಜನಿಕವಾಗಿ ಯುವತಿಯರ ನೃತ್ಯಕ್ಕೆ ಅವಕಾಶ ಕೊಟ್ಟವರು ಯಾರು ಎಂಬ ಹತ್ತು ಹಲವಾರು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿವೆ ಇನ್ನಾದರು ಇದಕ್ಕೆ ಸಂಭಂದಿಸಿದವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ವರದಿ.
ಶಿವಶಂಕರ ಕಡಬಲ್ಲವರ
ಮಹಾಲಿಂಗಪುರ