ಜನಸಂಖ್ಯೆಗೆ ಅನುಸಾರ ಮೀಸಲಾತಿಯು ಸಮುದಾಯದ ಎಲ್ಲಾ ವರ್ಗ ದವರಿಗೂ ಮತ್ತು ಕಟ್ಟ ಕಡೆಯ ಮನುಷ್ಯನ ವರೆಗೂ ತಳಪಬೇಕು ಇದು ಸಂವಿಧಾನ ದ ಮೂಲ ಆಶಯ ಹಾಗೂ ಸಂವಿಧಾನ ಪಿತಾಮಹ ಪರಮ ಪೂಜ್ಯ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ರವರು ಕಂಡಂತ ಕನಸು.
ಭಾರತಕ್ಕೆ ಸ್ವಾತಂತ್ಯ ಬಂದು ಎಪ್ಪತೈದು ವರ್ಷ ಗಲಾಗುತ್ತ ಬಂದಿದೆ ಅದರ ಈಗಿನ ಪರಿಸ್ಥಿತಿಯ ಒಂದು ಒಳ ನೋಟ ಕರ್ನಾಟಕ ರಾಜ್ಯ ದಲ್ಲಿ ಹೇಗಿದೆ ಎಂದು ಅವಲೋಕಿಸೋಣ.
ಲಿಂಗಾಯಿತ ಸಮುದಾಯದವರು ಕರ್ನಾಟಕ ದಲ್ಲಿ ಇರುವ ಜನಸಂಖ್ಯೆ
ಶೇ.8% ರಿಂದ ಶೇ.10%.ಆದರೆ ನಿಜ ಸಂಗತಿ ಒಪ್ಪದೇ ನಮ್ಮ ಜನಸಂಖ್ಯೆ ಶೇ.15% ರಿಂದ 20% ಎಂದು ಹೇಳುತ್ತಾ ಸತ್ಯಾ ಸತ್ಯತೆ ಯನ್ನು ಮರೆ ಮಾಚುತ್ತಾ ಇಲ್ಲಿನ ವರೆಗೂ ಜನಗಣತಿ ವರದಿಗಳ ಅಂಕಿ ಅಂಶ ಗಳನ್ನು ಬಹಿರಂಗ ಪಡಿಸಲು ಬಿಡದೆ ತಡೆಹಿಡಿಯುತ್ತ ಇರುವ ಇವರ (ಅಂದಾಜು ಜನಸಂಖ್ಯೆ 60 ಲಕ್ಷ ದಿಂದ 70 ಲಕ್ಷ) ಅವರ ಜನಸಂಖ್ಯೆಗೆ ಅನುಸಾರ 2 ಲಕ್ಷಕ್ಕೆ ಒಬ್ಬರು ಶಾಸಕರು ಆಯ್ಕೆ ಆದರು 30 ರಿಂದ 35 ಶಾಸಕರು ಶಾಸನ ಸಭೆಯಲ್ಲಿ ಇರಬೇಕು.ಆದರೇ ಈಗಿರುವ ಇವರ ಶಾಸಕರ ಸಂಖ್ಯೆ (ಅಂದಾಜು 50 ರಿಂದ 60) ಇನ್ನು ಇವರಲ್ಲಿ ಮುಖ್ಯ ಮಂತ್ರಿ ಪದವಿ ಅಲಂಕರಿಸಿದವರ ಪಟ್ಟಿ ನೋಡೋಣ :
1.ಎಸ್ ನಿಜಲಿಂಗಪ್ಪ,01/11/1956 ರಿಂದ 16/05/1958 ರ ವರೆಗೆ
2. ಬಿ ಡಿ ಜತ್ತಿ 16/05/1958 ರಿಂದ 14/03/1962 ರ ವರೆಗೆ
3. ಎಸ್ ಆರ್ ಕಂಠಿ 14/03/1962 ರಿಂದ 21/06/1962 ರ ವರೆಗೆ
4. ಎಸ್ ನಿಜಲಿಂಗಪ್ಪ 21/06/1962 ರಿಂದ 29/05/1968 ರ ವರೆಗೆ
5. ವೀರೇಂದ್ರ ಪಾಟೀಲ್ 29/05/1968 ರಿಂದ 18/03/1971 ರ ವರೆಗೆ
6. ಎಸ್ ಆರ್ ಬೊಮ್ಮಾಯಿ 13/08/1988 ರಿಂದ 21/04/1989 ರ ವರೆಗೆ
7. ವೀರೇಂದ್ರ ಪಾಟೀಲ್ 30/11/1989 ರಿಂದ 10/10/1990 ರ ವರೆಗೆ
8. ಜೆ ಹೆಚ್ ಪಾಟೀಲ್ 31/05/1996 ರಿಂದ 11/10/1999
9. ಬಿ ಎಸ್ ಯೆಡಿಯೂರಪ್ಪ 12/11/2007 ರಿಂದ 19/11/2007 ರ ವರೆಗೆ
10. ಬಿ ಎಸ್ ಯೆಡಿಯೂರಪ್ಪ 30/05/2008 ರಿಂದ 05/08/2011 ರ ವರೆಗೆ
11. ಜಗದೀಶ್ ಶೆಟ್ಟರ್ 12/07/2012 ರಿಂದ 13/05/2013 ರ ವರೆಗೆ
12. ಬಿ ಎಸ್ ಯೆಡಿಯೂರಪ್ಪ 17/05/2018 ರಿಂದ 23/05/2018 ರ ವರೆಗೆ
13. ಬಿ ಎಸ್ ಯೆಡಿಯೂರಪ್ಪ 26/07/2019 ರಿಂದ 28/07/2021 ರ ವರೆಗೆ
14. ಬಸವರಾಜ್ ಬೊಮ್ಮಾಯಿ 28/07/2021 ರಿಂದ ಪ್ರಸ್ತುತ.
ಒಕ್ಕಲಿಗರು ಕರ್ನಾಟಕದಲ್ಲಿ ಇರುವ ಜನಸಂಖ್ಯೆ ಶೇ.8% ರಿಂದ ಶೇ.10% ಇವರು ಕೂಡ ನಮ್ಮ ಜನಸಂಖ್ಯೆ ಶೇ.15%ಕ್ಕೂ ಹೆಚ್ಚು ಎಂದು ಸುಳ್ಳು ಹೇಳುತ್ತಾ ಅಧಿಕಾರ ಅನುಭವಿಸುತ್ತಿದ್ದಾರೆ. (ಅಂದಾಜು 50 ರಿಂದ 60 ಲಕ್ಷ) ಅವರ ಜನಸಂಖ್ಯೆ ಅನುಸಾರವಾಗಿ 25 ರಿಂದ 30 ಜನ ಶಾಸಕರಾಗಿ ಶಾಸನ ಸಭೆ ಯಲ್ಲಿ ಇರಬೇಕಾದವರು,ಆದರೆ ಈಗಿರುವ ಇವರ ಶಾಸಕರ ಸಂಖ್ಯೆ (ಅಂದಾಜು 45 ರಿಂದ 50)
ಮುಖ್ಯ ಮಂತ್ರಿ ಪೀಠ ಅಲಂಕರಿಸಿದವರ ಪಟ್ಟಿ ನೋಡೋಣ :
ಸ್ವಾತಂತ್ರ ನಂತರ ಕರ್ನಾಟಕ ರಾಜ್ಯ ಪುನರವಿಂಗಡಣೆ ವರೆಗೂ.(ಮೈಸೂರು ಪ್ರಾಂತ್ಯ)
1. ಚಂಗಲರಾಯ ರೆಡ್ಡಿ (ಕೆ ಸಿ ರೆಡ್ಡಿ) 25/10/1947 ರಿಂದ 30/03/1952 ರ ವರೆಗೆ
2. ಕೆಂಗಲ್ ಹನುಮಂತಯ್ಯ 30/03/1952 ರಿಂದ 19/08/1956 ರ ವರೆಗೆ
3. ಕಡಿದಾಲ್ ಮಂಜಪ್ಪ 19/08/1956 ರಿಂದ 31/10/1956 ರ ವರೆಗೆ
4. ಹೆಚ್ ಡಿ ದೇವೇಗೌಡ 11/12/1994 ರಿಂದ 31/05/1996 ರ ವರೆಗೆ
5. ಎಸ್ ಎಂ ಕೃಷ್ಣ 11/10/1999 ರಿಂದ 28/04/2004 ರ ವರೆಗೆ
6. ಹೆಚ್ ಡಿ ಕುಮಾರಸ್ವಾಮಿ 03/02/2006 ರಿಂದ 08/10/2007 ರ ವರೆಗೆ
7. ಡಿ ವಿ ಸದಾನಂದ ಗೌಡ 05/08/2011 ರಿಂದ 12/07/2012 ರ ವರೆಗೆ
8. ಹೆಚ್ ಡಿ ಕುಮಾರಸ್ವಾಮಿ 23/05/2018 ರಿಂದ 26/07/2019 ರ ವರೆಗೆ.
ಕುರುಬರ ಜನಸಂಖ್ಯೆ ಶೇ.7% ರಿಂದ ಶೇ.9% (ಅಂದಾಜು 50 ರಿಂದ 60 ಲಕ್ಷ) ಇವರ ಜನಸಂಖ್ಯೆ ಗೆ ಅನುಸಾರ ಶಾಸಕರಾಗಿ ಇರಬೇಕಾದ ಸಂಖ್ಯೆ 25 ರಿಂದ 30 ಆದರೆ ಇರುವುದು (ಅಂದಾಜು 15 ರಿಂದ 20) ಮುಖ್ಯ ಮಂತ್ರಿ ಪದವಿ ಯಾಗಿ ಕೆಲಸ ಮಾಡಿದವರು :
1. ಸಿದ್ದರಾಮಯ್ಯ 13/05/2013 ರಿಂದ 17/05/2018 ವರೆಗೆ
ಬ್ರಾಹ್ಮಣರು ಇರುವುದು ಶೇ.2% ರಿಂದ ಶೇ.3% (ಅಂದಾಜು 12 ರಿಂದ 15 ಲಕ್ಷ) ಶಾಸಕರಾಗಿ ಇವರ ಜನಸಂಖ್ಯೆಗೆ ಅನುಸಾರ ಇರಬೇಕಾದವರು 6 ರಿಂದ 8 ಆದರೆ ಇರುವುದು (ಅಂದಾಜು 12 ರಿಂದ 15) ಮುಖ್ಯ ಮಂತ್ರಿ ಪೀಠ ಅಲಂಕರಿಸಿದವರು :
1. ಆರ್ ಗುಂಡೂರಾವ್ 12/01/1980 ರಿಂದ 10/01/1983 ರ ವರೆಗೆ
2. ರಾಮಕೃಷ್ಣ ಹೆಗ್ಗಡೆ 10/01/1983 ರಿಂದ 07/03/1985 ರ ವರೆಗೆ
3. ರಾಮಕೃಷ್ಣ ಹೆಗ್ಗಡೆ 08/03/1985 ರಿಂದ 13/08/1988 ರ ವರೆಗೆ
ಜನ ಸಂಖ್ಯೆ ಯಲ್ಲಿ ಕಡಿಮೆ ಇರುವ ಅರಸು (ಹಿಂದುಳಿದ ಜಾತಿ) ಯವರು ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದು :
1. ಡಿ ದೇವರಾಜ್ ಅರಸ್ 20/03/1972 ರಿಂದ 31/12/1977 ರ ವರೆಗೆ
2. ಡಿ ದೇವರಾಜ್ ಅರಸ್ 31/12/1978 ರಿಂದ 12/01/1980 ರ ವರೆಗೆ.
ಜನಸಂಖ್ಯೆಯಲ್ಲಿ ಶೇ.2% ಇಲ್ಲದ ಭಜಂತ್ರಿ (ಸವಿತಾ ಸಮಾಜ) ದವರಾದ ಶ್ರೀ ವೀರಪ್ಪ ಮೊಯಿಲಿ ಯವರು 19/11/1992 ರಿಂದ 11/12/1994 ರ ವರೆಗೂ ಮುಖ್ಯಮಂತ್ರಿ ಯಾಗಿ ಅಧಿಕಾರ ಮಾಡಿದ್ದರು.
ಹಾಗೆಯೇ ಜನಸಂಖ್ಯೆಯಲ್ಲಿ ಶೇ.1% ಇಲ್ಲದ ರಜಪೂತ ಸಮಾಜ ದವರಾದ ಶ್ರೀ ಧರಮ್ ಸಿಂಗ್ ರವರು ಮುಖ್ಯಮಂತ್ರಿ ಗಳಾಗಿ 28/05/2004 ರಿಂದ 03/02/2006 ಅಧಿಕಾರ ಚಲಾಯಿಸಿದರು.
ಕೂರ್ಗ್ ಪ್ರಾಂತ್ಯದ ಮುಖ್ಯಮಂತ್ರಿ ಗಳಾಗಿ ಕೊಡವ ಸಮುದಾಯದ ಸಿ ಎಂ ಪೂನಾಚ್ಚ ರವರು 1952 ರಿಂದ 1956 ರ ವರೆಗೂ ಅಧಿಕಾರ ಮಾಡಿದ್ದರು. ( ಕೂರ್ಗ್ ರಾಜ್ಯ ಸ್ಥಾಪನೆ 25/10/1947 ನಂತರ ಮೈಸೂರು ಸಂಸ್ಥಾನದಲ್ಲಿ 01/11/1956 ರಲ್ಲಿ ವಿಲೀನ ವಾಯಿತು).
ಕರ್ನಾಟಕ ದಲ್ಲಿ ರಾಷ್ಟ್ರಪತಿಗಳ ಆಡಳಿತ :
1. 19/03/1971 ರಿಂದ 20/03/1972 ರ ವರೆಗೂ
2. 31/12/1977 ರಿಂದ 28/02/1978
3. 21/04/1989 ರಿಂದ 30/11/1989 ರ ವರೆಗೂ
4. 10/10/1990 ರಿಂದ 17/10/1990
5. 08/10/2007 ರಿಂದ 12/11/2007 ರ ವರೆಗೂ
6. 20/11/2007 ರಿಂದ 29/05/2008 ರ ವರೆಗೂ
(ಪೂರ್ಣ ಮಾಹಿತಿ ಗೋಸ್ಕರ ರಾಷ್ಟ್ರಪತಿಗಳ ಆಡಳಿತದ ಮಾಹಿತಿ ಕೊಡಲಾಗಿದೆ)
ಜನಸಂಖ್ಯೆಯಲ್ಲಿ ಶೇ.3% (ಅಂದಾಜು 12 ರಿಂದ 15 ಲಕ್ಷ) ಇರುವ ಈಡಿಗ/ಬಿಲ್ಲವ ಸಮುದಾಯದ ಮುಖ್ಯಮಂತ್ರಿ ಯಾಗಿ ಶ್ರೀ ಎಸ್ ಬಂಗಾರಪ್ಪ ನವರು 17/10/1990 ರಿಂದ 19/12/1992 ರ ವರೆಗೂ ಅಧಿಕಾರ ದಲ್ಲಿ ಇದ್ದರು.
ವಾಸ್ತವ ಸ್ಥಿತಿ ಹಾಗೂ ಜನಸಂಖ್ಯೆಯ ಅಂಖ್ಯೆ ಸಂಖ್ಯೆ ಜಾತಿವಾರು ಎಷ್ಟಿದೆ ಎಂಬುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಮೊನ್ನೆ ಡಿ ಕೆ ಶಿವ ಕುಮಾರ್ ರವರು ಮಾತನಾಡುತ್ತ ಎಸ್ ಎಂ ಕೃಷ್ಣ, ಮುಖ್ಯಮಂತ್ರಿ ಆದ ನಂತರ ಮತ್ತೆ ಕಾಂಗ್ರೆಸ್ 2023 ರಲ್ಲಿ ಅಧಿಕಾರಕ್ಕೆ ಬಂದರೆ ಮತ್ತೆ 20 ವರ್ಷಗಳ ಬಳಿಕೆ ಒಬ್ಬ ಒಕ್ಕಲಿಗ ಮುಖ್ಯಮಂತ್ರಿ ಯನ್ನು ಕರ್ನಾಟಕ ದಲ್ಲಿ ನೋಡಬಹುದು ಆದುದರಿಂದ ಒಕ್ಕಲಿಗರೆಲ್ಲ ಕಾಂಗ್ರೆಸ್ ಗೆ ಓಟು ಹಾಕಿ ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವುದು ಈಗ ಸುದ್ದಿಯಲ್ಲಿದೆ. ಇನ್ನೊಂದು ಕಡೆ ಬಸವನ ಗೌಡ ಯತ್ನಾಳ್, ರವರು ಸಾಧರ (ಪಂಚಮಸಾಲಿ) ಲಿಂಗಾಯಿತರು ಗಳಿಗೆ ಮುಖ್ಯಮಂತ್ರಿ ಪದವಿ ಒಂದು ಬಾರಿಯೂ ದಕ್ಕಿಲ್ಲ ಲಿಂಗಾಯಿತರ ಜನಸಂಖ್ಯೆ ಯಲ್ಲಿ (ಒಳ ಪಂಗಡ) ಸಾಧರ ಅವರೆ ಹೆಚ್ಚಿನ ಪ್ರಮಾಣ ದಲ್ಲಿ ಇದ್ದಾರೆ ಆದುದರಿಂದ ಅವರಿಗೆ ಮುಖ್ಯಮಂತ್ರಿಯ ಪದವಿಯ ಒಂದು ಅವಕಾಶ ಕೊಡಿ ಯೆಂದು ಇನ್ನೊಂದು ಕಡೆ ಒತ್ತಡದ ತಂತ್ರ ಬಳಸಿ ಮಠ ಗಳ ಸ್ವಾಮೀಜಿ ಗಳಿಂದ ಹೇಳಿಕೆ ಕೊಡಿಸಿ ಪ್ರಚಾರ ಗಿಟ್ಟಿಸಿ ಕೊಳ್ಳುವ ಪ್ರಯತ್ನ ಮಾಡುತ್ತ ಒತ್ತಾಯಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ನವರೆ ಮುಖ್ಯಮಂತ್ರಿ ಯೆಂದು ಇನ್ನೊಂದು ಬಣ ಕೆಲಸ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಮುಸಲ್ಮಾನರ ಸಂಖ್ಯೆ ರಾಜ್ಯದಲ್ಲಿ ಶೇ.10% ಶೇ.12% (ಅಂದಾಜು 65 ಲಕ್ಷ ದಿಂದ 75 ಲಕ್ಷ ) ಜನಸಂಖ್ಯೆಗೆ ಅನುಸಾರ ಇವರ ಶಾಸಕರು 30 ರಿಂದ 35 ಜನ ಇರ ಬೇಕಾಗಿತ್ತು ಆದರೆ ಇರುವುದು ಅಂದಾಜು 10 ರಿಂದ 15 ಮಾತ್ರ.ಆದರೆ ಇವರಿಗೆ ಇದುವರೆಗೂ ಮುಖ್ಯಮಂತ್ರಿ ಸ್ಥಾನ ದಕ್ಕಿಲ್ಲ.
ಹಾಗೆಯೇ ವಾಲ್ಮೀಕಿ ಸಮುದಾಯದ (ST ಜನಾಂಗ) ಜನಸಂಖ್ಯೆ ಶೇ.7.5% ರಿಂದ ಶೇ.9% ರಷ್ಟಿದೆ (ಅಂದಾಜು 45 ಲಕ್ಷ ರಿಂದ 50 ಲಕ್ಷ) ಇವರ ಜನಸಂಖ್ಯೆಗೆ ಅನುಸಾರ ಇವರು 20 ರಿಂದ 25 ಜನ ಶಾಸಕರಾಗಿ ಇರಬೇಕಿತ್ತು ಆದರೆ ಇರುವುದು ಆಯ್ಕೆ ಆಗುತ್ತಿರುವುದು ಅಂದಾಜು 10 ರಿಂದ 15 ಮಾತ್ರ.ಅವರಿಗೂ ಕೂಡ ಮುಖ್ಯಮಂತ್ರಿ ಪದವಿ ದಕ್ಕಿಲ್ಲ.
ಇನ್ನೂ ಪರಿಶಿಷ್ಟ ಜಾತಿಯಿಂದ ಕರ್ನಾಟಕ ವಿಧಾನ ಸಭೆಗೆ ಮೀಸಲಾತಿ ಯಿಂದ ಆಯ್ಕೆ ಆಗುವ ಶಾಸಕರ ಸಂಖ್ಯೆ 36 ಹಾಗೂ ಜನಸಂಖ್ಯೆ ಯಲ್ಲಿ ಇವರು ಇರುವುದು ಶೇ.15% ರಿಂದ ಶೇ.18%.(ಅಂದಾಜು 1 ಕೋಟಿ ಯಿಂದ 1.10 ಒಂದು ಕೋಟಿ ಹತ್ತು ಲಕ್ಷ) ಜನಸಂಖ್ಯೆ ಗೆ ಅನುಸಾರ ಶಾಸಕರಾಗಿ ಆಯ್ಕೆ ಆಗಬೇಕಾದವರ ಸಂಖ್ಯೆ 55 ರಿಂದ 60, ಆದರೆ ಈಗಿರುವ ಶಾಸಕರ ಸಂಖ್ಯೆ ಅಂದಾಜು 37 ರಿಂದ 40 ಮಾತ್ರ.
ಈಗ ಅಸಲಿನ ಲೆಕ್ಕಾಚಾರಕ್ಕೆ ಬರುವುದೇ ಆದರೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೂ ಮುಖ್ಯಮಂತ್ರಿ ಪದವಿ ಪಡೆದವರು ಹೆಚ್ಚಿಗೆ ಎಲ್ಲರೂ ಜನಸಂಖ್ಯೆಯಲ್ಲಿ ಕಡಿಮೆ ಇರುವ ಬಲಿಷ್ಠ ಸಮುದಾಯ ದವರೆ (ಲಿಂಗಾಯತ ಮತ್ತು ಒಕ್ಕಲಿಗ) ಆಗಿದ್ದಾರೆ. ಬಹುಸಂಖ್ಯಾತ ರಾದ ಪರಿಶಿಷ್ಟ ಜಾತಿ ಯವರಿಗೆ, ಪರಿಶಿಷ್ಟ ಪಂಗಡ ದವರಿಗೆ, ಹಾಗೂ ಅಲ್ಪಸಂಖ್ಯಾತ (ಮೈನಾರಿಟಿ) ಕಮ್ಯೂನಿಟಿ ಯವರಾದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮ ದವರಿಗೆ ಇಲ್ಲಿಯ ವರೆಗೂ ಮುಖ್ಯಮಂತ್ರಿ ಪದವಿ ದಕ್ಕದಿರುವುದು ಅಥವಾ ದಕ್ಕದಂತೆ ಮಾಡಿರುವುದು ಮೇಲ್ಜಾತಿ ಯವರ,ಜಾತಿ ಕುತಂತ್ರ, ತಾರತಮ್ಯ ರಾಜಕೀಯ,ಅಧಿಕಾರ ದಾಹ, ಅವರ ಕುಠಿಲ ನೀತಿಗಳು ಹಾಗೂ ಷಡ್ಯಂತ್ರ ಗಳೇ ಕಾರಣ.
ಒಬ್ಬ ಹೊಲೆ ಮಾದಿಗನ್ನ ಪ್ರಜಾ ಪ್ರತಿನಿಧಿ ಮಾಡಿ ಅವರ ಮುಂದೆ ನಾವು ಕೈ ಕಟ್ಟಿ ನಿಲ್ಲಬೇಕೆ ಎಂಬ ತಾತ್ಸಾರ ಮನೋಭಾವನೆ ಮೇಲ್ಜಾತಿ ಎಲ್ಲರಲ್ಲೂ ಇರುವುದು ಕಟು ಸತ್ಯ.
ಮೇಲ್ಜಾತಿ ಯವರು ಒಬ್ಬ ಸ್ಪೃಶ್ಯರಾದ ಕೊರಮ, ಕೊರಚ, ಲಂಬಾಣಿ ಹಾಗೂ ಭೋವಿ ಯವರನ್ನು ಬೇಕಾದರೆ ಪ್ರೊಸ್ತಾಹಿಸುತ್ತಾರೆ ಆದರೆ ಒಬ್ಬ ಅಸ್ಪ್ರುಶ್ಯನನ್ನು ಅಪ್ಪಿ ತಪ್ಪಿ ಕೂಡ ಸಹಿಸುವುದಿಲ್ಲ ಇದು ಕಟು ಸತ್ಯ.
ಕರ್ನಾಟಕ ಇತಿಹಾಸದಲ್ಲಿ ಶೋಷಿತರ ದಮನಿತರ ಪರ ಜನಪರ ವಾದ ಕೆಲಸ ಮಾಡಿದವರು ಶ್ರೀ ಡಿ ದೇವರಾಜ್ ಅರಸು ಹಾಗೂ ಶ್ರೀ ಸಿದ್ದರಾಮಯ್ಯ ನವರು ಮಾತ್ರ ಸಚಿವ ಸಂಪುಟ ದಲ್ಲಿ ಇವರ ಸಮುದಾಯ ದವರನ್ನು ಯಾರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳದೆ ಹೆಚ್ಚಿನ ಆದ್ಯತೆಯನ್ನು ಎಲ್ಲಾ ಸಮುದಾಯದವರಿಗೆ ನೀಡಿದ ಕೀರ್ತಿ ಇವರಿಬ್ಬರಿಗೆ ಮಾತ್ರ ಸಲ್ಲುತ್ತದೆ. ಈ ಸಲುವಾಗಿಯೇ ಕರ್ನಾಟಕ ಇತಿಹಾಸದಲ್ಲಿ ಇವರಿಬ್ಬರ ಹೆಸರು ಚಿರಸ್ತಾಯಿ ಯಾಗಿ ನಿಲ್ಲುತ್ತದೆ. ಹಾಗೂ ಐದು ವರ್ಷ ಜನ ಸಾಮಾನ್ಯರಿಗೆ ಹತ್ತಿರ ವಾಗಿ ಆಡಳಿತ ನೀಡಿ ಪೂರ್ಣವದಿ ಪೂರೈಸಿದ ಜನಪ್ರಿಯ ಮುಖ್ಯಮಂತ್ರಿ ಗಳು ಇವರಿಬ್ಬರೇ.
ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಆಗುತ್ತಿವೆ ಆದರೆ ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಹಂಚಿಕೆ ನಡೆದಿರುವುದು ಹೆಚ್ಚಿನ ಭಾರಿ ಒಕ್ಕಲಿಗ ಮತ್ತು ಲಿಂಗಾಯಿತರ ಈ ಎರಡು ಸಮುದಾಯಗಳ ನಡುವೆ ಮಾತ್ರ.(ಮೇಲೆ ಕೊಟ್ಟಿರುವ ಅಂಖ್ಯೆ ಸಂಖ್ಯೆ ಹಾಗೂ ವಿವರ ನೋಡಿ ನಿಮಗೆ ಗೊತ್ತಾಗುತ್ತದೆ).
ಒಂದು ಬಾರಿ ಒಂದು ಸಮುದಾಯದವರು ಮುಖ್ಯಮಂತ್ರಿ ಆದರೆ ಅವರವರ ಸಮುದಾಯಗಳವರನ್ನೇ ಅರ್ಧಕ್ಕೆ ಅರ್ಧ ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿ ಸಂಪನ್ಮೂಲಗಳು ಇರುವ ಹೆಚ್ಚಿನ ಖಾತೆ ಗಳನ್ನು ಅವರವರೆ ಹಂಚಿ ಕೊಂಡು ಇನ್ನೊಂದು ಸಮುದಾಯದವರು ಅಧಿಕಾರ ಪಡೆದಾಗ ಅವರೂ ಕೂಡ ಹಾಗೆ ಮಾಡಿದ ಕಾರಣ ಇಂದು ಎಲ್ಲಾ ಕ್ಷೇತ್ರ/ರಂಗ ಗಳಲ್ಲಿ ಮುಂಚೂಣಿಯಲ್ಲಿ ಇರುವುದು ಕೂಡ ಈ ಎರಡು ಪ್ರಭಲ ಬಲಿಷ್ಠ ಸಮುದಾಯಗಳು ಮಾತ್ರ. ಉಳಿದ ಸಮುದಾಯ ದವರ ಬಗ್ಗೆ ಆಸಕ್ತಿ ವಹಿಸದೆ ಹಾಗೂ ಪ್ರಾಮುಖ್ಯತೆ ಇರುವ ಸಚಿವ ಖಾತೆ ಗಳನ್ನು ಹಂಚಿದರು ಅವರಿಗೆ ಅಧಿಕಾರ ಚಲಾಯಿಸಲು ಬಿಡದೆ ನೋಡಿಕೊಂಡಿರುವುದು ಕಂಡು ಬರುತ್ತದೆ.
ಸಂವಿಧಾನದ ಆಶಯದ ಮೂಲನೆ ಸರ್ವರಿಗೂ ಸಮಬಾಳು ಹಾಗೂ ಸರ್ವರಿಗೂ ಸಮಪಾಲು ಆದರೆ ಇದರ ಪಾಲನೆ ಮಾಡುವುದರಲ್ಲಿ ಕರ್ನಾಟಕ ದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಸಂಪೂರ್ಣ ವಿಫಲ ವಾಗಿವೇ.ಇಲ್ಲಿ ಒಳ ಒಪ್ಪಂದದ ರಾಜಕಾರಣ/ರಾಜಕೀಯದ ಮೇರೆಗೆ ಬಲಿಷ್ಠ ಜಾತಿಯವರ ಪರ ಅಧಿಕಾರ ಹಂಚಿಕೆಯಾಗಿ ಉಳ್ಳವರ ಪಲಾಗಿದೆ. ಅದಿಕಾರದ ರುಚಿ ಕಂಡವರು ಅಷ್ಟು ಸುಲಭವಾಗಿ, ಸಲೀಸಾಗಿ ಬೇರೆಯವರಿಗೆ ಅಧಿಕಾರ ಬಿಟ್ಟು ಕೊಡುತ್ತಾರೆಯೇ?
ಶೋಷಿತರು ಹಾದಿ ಬೀದಿ ಯಲ್ಲಿ ಹೋರಾಟದಲ್ಲಿ ನಿರಂತರ ವಾಗಿ ನಿರತರಾಗಿರುವಂತೆ ವಾತಾವರಣ ಸೃಷ್ಟಿ ಮಾಡಲಾಗಿದೆ.
ಶೋಷಿತ, ದಮನಿತ, ತುಳಿತಕ್ಕೆ ಒಳಗಾದವರು (oppressed, depressed and suppressed) ವರ್ಗ ತಲಾ ತಲಾಂತರ ದಿಂದ ಶೈಕ್ಷಣಿಕ ವಾಗಿ, ಸಾಮಾಜಿಕ ವಾಗಿ, ಆರ್ಥಿಕವಾಗಿ, ಸಂಸ್ಕೃತಿಕ ವಾಗಿ ಉದ್ದೇಶ ಪೂರ್ವಕ ವಾಗಿ ವಂಚಿತರನ್ನಾಗಿ ಮಾಡಲಾಗಿದೆ.
ಶೋಷಿತರ ಮೀಸಲಾತಿಯೂ ಸೇರಿದಂತೆ ಯಾವುದೇ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಳಪದಂತೆ ನೋಡಿಕೊಳ್ಳುವಲ್ಲಿ ಬಲಿಷ್ಠ ಜಾತಿಯ ಪ್ರತಿನಿಧಿಗಳು ಅಧಿಕಾರ ಷಾಹಿ ಯಶಸ್ವಿ ಯಾಗಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿ ಶೋಷಿತ ಸಮುದಾಯದವರನ್ನು ತುಳಿಯುತ್ತ ಬಂದವರು ಸ್ವಾತಂತ್ಯ ನಂತರವೂ ಅದನ್ನು ಬೇರೆ ಬೇರೆ ರೂಪದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ಸಂವಿಧಾನದಲ್ಲಿ ಶೋಷಿತರಿಗೆ ಯಾವ ಯಾವ ಯೋಜನೆಗಳನ್ನು ರೂಪಿಸಿದ್ದರೋ ಅವುಗಳನ್ನೆಲ್ಲಾ ಜಾರಿ ಗೊಳಿಸದಂತೆ ಮಾಡುವಲ್ಲಿ ಬಲಿಷ್ಠ ಸಮುದಾಯಗಳು ನೋಡಿ ಕೊಂಡಿದ್ದಾರೆ.
ಯಾರೋ ಬಂದು ಏನೋ ಮಾಡುತ್ತಾರೆ ಅದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರಿಗೆ ಎಂಬ ಭ್ರಮೆ ಯಿಂದ ಹೊರ ಬರಬೇಕಾದ ಸಮಯ ಬಂದಿದೆ. ಇವರೆಲ್ಲರೂ ಸೇರಿ ಒಂದಾಗಿ ಒಗ್ಗಟ್ಟಾಗಿ ಹೋದರೆ ಯಾರ ಹತ್ತಿರ ಹೋಗಿ ಅಧಿಕಾರಕ್ಕಾಗಿ ಕೈ ಚಾಚಾ ಬೇಕಾದ ಅವಶ್ಯಕತೆ ಉದ್ಭವಿಸುವುದಿಲ್ಲ,ತಾನೆ ತಾನಾಗಿ ಅಧಿಕಾರ ಇವರ ಹತ್ತಿರ ಹುಡುಕಿಕೊಂಡು ಬರುತ್ತದೆ.
ಆ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ರೂಪಿಸ ಬೇಕಾದ ಸಮಯ ಹತ್ತಿರ ಬಂದಿದೆ.ಎಲ್ಲಾ ಸಮುದಾಯದ ಜನಪ್ರತಿನಿದಿನಗಳು,ಹಿರಿಯರು, ಕಿರಿಯರು,ನಾಯಕರು, ಪ್ರಜ್ಞಾವಂತರು, ಬುದ್ದಿಜೀವಿಗಳು, ಹೋರಾಟಗಾರರು,ಇದರ ಬಗ್ಗೆ ಗಂಭೀರ ವಾಗಿ ಚಿಂತಿಸಿ ಶೀಘ್ರವಾಗಿ ತೀರ್ಮಾನ ತೆಗೆದು ಕೊಳ್ಳಬೇಕು.
ಈ ನಿಟ್ಟಿನಲ್ಲಿ ಎ ಜೆ ಸದಾಶಿವ ಆಯೋಗ ವೈಜ್ಞಾನಿಕ ವಾಗಿ ಸಲ್ಲಿಸಿರುವ ವರದಿಯನ್ನು ಜಾರಿ ಗೊಳಿಸಲು ಪರಿಶಿಷ್ಟ ಜಾತಿಯ ಮುಖ್ಯವಾಗಿ (ಹೊಲೆಯ ಮತ್ತು ಮಾದಿಗ ಎಲ್ಲಾ ಸಮುದಾಯ ದವರು) ಒಂದಾಗಿ ಸರ್ಕಾರವನ್ನು ಒತ್ತಾಯಿಸ ಬೇಕು.ನಮ್ಮಲ್ಲಿ ಐಕ್ಯತೆ ಮೂಡಬೇಕು. ವರ್ಗಿಕರಣ ಇಂದಲ್ಲ ದಿದ್ದರೂ ನಾಳೆ ಆಗಲೇ ಬೇಕು ತಡ ಮಾಡಿದಷ್ಟು ನಮ್ಮಲ್ಲೇ ವೈಮನಸ್ಯ ಹೆಚ್ಚಾಗುವ ಸಾಧ್ಯತೆಗಳು ಇರುವ ಕಾರಣ ಅಥವಾ ನಮ್ಮಲ್ಲೇ ಒಡಕು ಮೂಡಿಸುವ ಷಡ್ಯಂತ್ರ ಮಾಡಿ ಬಡಿದಾಡಿ ಕೊಂಡಿರುವಂತೆ ಮಾಡಿ ಕಾಲ ದುಡುವ/ತಳ್ಳುವ ಪ್ರಯತ್ನಗಳಿಗೆ ಅಂತ್ಯ ಹಾಡಿದಂಗೆ ಆಗುತ್ತದೆ ಹಾಗೂ ಬಾಬಾಸಾಹೇಬರ ಆಶಯ ನೆರವೇರಿಸಿ ದಂತೆ ಆಗುತ್ತದೆ ಯೋಚಿಸಿ ತೀರ್ಮಾನಿಸಿ.
ಸಂಗ್ರಹಣೆ : ಗೂಗಲ್/ವಿಕಿಪೀಡಿಯಾ
ಜನ ಸಂಖ್ಯೆ ಅಂಕಿ ಅಂಶ 2011 census (ಕೋವಿಡ್ ಪ್ರಯುಕ್ತ 2021ರ census ವಿಳಂಬ ವಾಗಿದೆ)
ಲೇಖಕರು :
ನಾಗರಾಜು ಎಸ್.
ಬಿ ಕಾಂ., ಎಲ್ ಎಲ್ ಬಿ.
96631 40019
ಸಾಮಾಜಿಕ ಚಿಂತಕರು ಬೆಂಗಳೂರು