ಮಹಾಲಿಂಗಪುರ ಪೋಲಿಸ್ ಠಾಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು ಕಾರ್ಯಾಗಾರ ನಡೆಯಿತು.
ಮಹಾಲಿಂಗಪುರ ಪಟ್ಟಣದಲ್ಲಿ ಪೋಲಿಸ ಇಲಾಖೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ. ತಾಲ್ಲೂಕಾ ಕಾನೂನು ಸಮಿತಿ ಬನಹಟ್ಟಿ.ಅಭಿಯೋಜನಾ ಇಲಾಖೆ.ವಕೀಲರ ಸಂಘ.ತಾಲೂಕಾಡಳಿತ ರಬಕವಿ ಬನಹಟ್ಟಿ.ತಾಲೂಕಾ ಪಂಚಾಯತ. ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಜಮಖಂಡಿ. ಈ ಎಲ್ಲಾ ಆಶ್ರಯಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು ಸ್ಥಳೀಯ ಪೋಲಿಸ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮ ಇಚ್ಚಿತಿನ ದಿನಗಳಲ್ಲಿ ಮಕ್ಕಳನ್ನು ಮತ್ತು ಮಹಿಳೆಯರನ್ನು ಅನೈತಿಕ ಕಳ್ಳ ಸಾಗಾಣಿಕೆಯನ್ನು ದೌರ್ಜನ್ಯಗಳನಗನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಳ್ಳಲಾಗಿದೆ ಎಂದು ರಬಕವಿ ಬನಹಟ್ಟಿ ಸಿಪಿಐ ಜೆ.ಕರಣೇಶಗೌಡ ತಿಳಿಸಿದರು. ಮತ್ತು ಬಾಲ್ಯ ವಿವಾಹದಂತ ಕಾನೂನು ಬಾಹಿರ ಚಟುವಟಿಕೆಗಳನ್ನು ಕೇಳ ಮಟ್ಟದಿಂದ ತಡೆದರು ಕೆಲ ಕಾನೂನು ಅರಿವಿಲ್ಲದ ವ್ಯಕ್ತಿಗಳು ಬಾಲ್ಯ ವಿವಾಹ ಮಾಡುತ್ತಿರುವುದ ಆಘಾತಕಾರಿಯಾಗಿದೆ ಸಮಾಜದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಕ್ರಮ ಅನಾಚಾರಗಳನ್ನು ತಡೆಯಲು ಪೋಲಿರಿಗೆ ಸಹಕಾರವು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ರಬಕವಿ ಬನಹಟ್ಟಿ ನ್ಯಾಯಾಲಯದ ಗೌರವಾನ್ವಿತ ದಿವಾಣಿ ನ್ಯಾಯಾಧೀಶರಾದ .ಕಿರಣಕುಮಾರ.ಡಿ.ವಡಗೇರಿ ಹಾಗೂ ದಿವಾಣಿ ನ್ಯಾಯಾಧೀಶರಾದ ಶ್ರೀಮತಿ ಶುಷ್ಮ ಟಿ.ಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ
ವಕೀಲರ ಸಂಘದ ಅಧ್ಯಕ್ಷರಾದ ಶ್ರೀಕಾಂತ ಕುಲರ್ಣಿ
ಠಾಣಾಧಿಕಾರಿ ವಿಜಯಕುಮಾರ ಕಾಂಬಳೆ ಇನ್ನೂ ಅನೇಕ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭಾಗ ವಹಿಸಿದ್ದರು.
ವರದಿ.
ಶಿವಶಂಕರ ಕಡಬಲ್ಲವರ
ಮಹಾಲಿಂಗಪುರ