ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿಯ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಸೂಪಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು ದಿನಾಂಕ 05/02/2022 ರಂದು ತಿರ್ವ ಅನಾರೋಗ್ಯದಿಂದ ಹೃದಯಾಘಾತದಿಂದ ನಿಧನರಾಗಿದ್ದರು ಈ ಸುದ್ದಿ ತಿಳಿದ ನಾಡಿಗೆ ಒಂದು ತಿರ್ವ ಆಘಾತವನ್ನುಂಟು ಮಾಡಿತ್ತು ಭಾವೈಕ್ಯಯ ಕೊಂಡಿಯಾಗಿದ್ದ ಸೂಪಿ ಸಂತನನ್ನು ಕಳೆದುಕೊಂಡ ಇಂದಿಗೆ ಐದು ದಿನ ಕಳೆದಿದೆ ಆದರೂ ಸಹ ಹಲವಾರು ಮಠಾಧೀಶರು.ಸಾಹಿತಿಗಳು .ರಾಜಕಾರಣಿಗಳು ಹೀಗೆ ಗನ್ಯಾತಿ ಗನ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ ಅದರಂತೆ ಇಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಇಬ್ರಾಹಿಂ ಸುತಾರ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದರು ಇದೇ ಸಂದರ್ಭದಲ್ಲಿ ಅವರ ಪುತ್ರ ಇಬ್ರಾಹಿಂ ಅವರ ಕನಸಿನ ಮಾತುಗಳನ್ನು ಸರ್ಕಾರದ ವತಿಯಿಂದ ನಡೆಸಿಕೊಡುವಂತೆ ಮೌಖಿಕ ಮನವಿ ಮಾಡಿದರು ಇದಕ್ಕೆ ಸಚಿವರು ಸಹ ಸ್ಥಳೀಯ ಶಾಸಕರೊಂದಿಗೆ ಮಾತನಾಡಿ ಅವರ ಹೆಸರಗೆ ತಕ್ಕಂತೆ ಸರ್ಕಾರದ ಸೌಲಭ್ಯದಿಂದ ಮಾಡಿಕೊಡುವ ಭರವಸೆ ನೀಡಿದರು.ಸಚಿವರೊಂದಿಗೆ ಶೇಖರ ಅಂಗಡಿ.ಸಿದ್ಧುಗೌಡ ಪಾಟೀಲ.ಸಜನಸಾಬ ಪೆಂಡಾರಿ ಜಮೀರ ಯಕ್ಸಂಬಿ. ಶ್ರೀಮಂತ ಹಳ್ಳಿ.
ಭೀಮಶಿಗೌಂಡಿ. ಪತ್ರಕರ್ತರಾದ ಜಯರಾಮ ಶೆಟ್ಟಿ ಮಹೇಶ ಆರಿ.
ಇನ್ನೂ ಅನೇಕರು ಸಾಂತ್ವನ ಹೇಳಲು ಭಾಗಿಯಾಗಿದ್ದರು.
ವರದಿ.
ಶಿವಶಂಕರ ಕಡಬಲ್ಲವರ
ಮಹಾಲಿಂಗಪುರ