ಕೂಡ್ಲಿಗಿ: ಐದು ವರ್ಷಾದ್ರೂ “ಅನ್ನಭಾಗ್ಯ” ಕಾರ್ಡ್ ಇಲ್ಲದೇ “ದೌರ್ಭಾಗ್ಯ”- ಗ್ಯಾರಂಟಿ ಸರ್ಕಾರದ ವಿರುದ್ದ ಗ್ಯಾರಂಟಿ ಸಿಗದ ಫಲಾನುಭವಿಗಳ ದೂರು- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕಳೆದ ಐದು ವರ್ಷಾದ್ರೂ ಅಕ್ಕಿ ಕಾರ್ಡೇ ಕೊಟ್ಟಿಲ್ಲ ಎಂದು, ಪಡಿತರ ಸೌಲಭ್ಯ ವಂಚಿತ ನೊಂದ ಫಲಾನುಭವಿಗಳು ದೂರಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ನೂರಾರು ಅರ್ಹ ಪಡಿತರ ಚೀಟಿ ಅರ್ಹ ಫಲಾನುಭವಿಗಳು ಸೌಲಭ್ಯ ವಂಚಿತರಿದ್ದಾರೆ. ಅವರು ಕಾರ್ಡ್ ಹೊಂದಿದ್ದರೂ ಕೂಡ ಇಲ್ಲದಂತಿದ್ದಾರೆ, ಕೈ ಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎನ್ನುವಂತಾಗಿ ಪಡಿತರ ಚೀಟಿಗಾಗಿ ತೀವ್ರ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಪಡಿತರ ಚೀಟಿಗಾಗಿ ಕಳೆದ 2019 ರಂದು ಅರ್ಜಿ ಸಲ್ಲಿಸಿದ್ದು, ಕಾರ್ಡಿಗಾಗಿ ಅಧಿಕಾರಿಗಳು ಸೂಚಿಸಿದ ದಿನಗಳಲ್ಲಿ. ನೂರಾರು ದಿನಗಳ ಕಾಲ ಕಚೇರಿಗೆ ಅಲೆದಾಡುತಿದ್ದು ತುಂಬಾ ವಿಳಂಬ ನೀತಿ ಅನುಸರಿಸಲಾಗುತ್ತಿದೆ, ಕಾರಣ ಕೇಳಿದರೆ ಸರ್ವರ್ ಇಲ್ಲ ಎಂಬ ಸಬೂಬು ರೆಡಿಯಾಗಿರುತ್ತದೆ. ಕನಿಷ್ಠ ಆರು ತಿಂಗಳು ವರ್ಷ ದಿಂದ, ಐದು ವರ್ಷಗಳ ವರೆಗೆ ಅಲೆದಾಡುತ್ತಿರುವುದು ಕಂಡು ಬಂದಿದೆ. ಆಹಾರ ಇಲಾಖೆಯ ನಿರ್ಲಕ್ಷ್ಯ ಧೊರಣೆಯಿಂದಾಗಿ ತಮಗೆ ಸರ್ಕಾರಿ ಸೌಕರ್ಯಗಳು ಸಿಗದಂತಾಗಿದ್ದು, ಅನ್ನಭಾಗ್ಯ ಗೃಹ ಲಕ್ಷ್ಮಿ ಯೋಜನೆಗಲು ಸೇರಿದಂತೆ ಯಾವುದೇ ಸೌಲಭ್ಯಗಳು ಒದಗದಂತಾಗಿದೆ.
ಇದರಿಂದಾಗಿ ಸರ್ಕಾರ ಜನಹಿತ ಪಂಚ ಗ್ಯಾರಂಟಿಗಳು ಅಲಭ್ಯವಾಗಿವೆ, ಮತ್ತು ಇತರೆ ಸರ್ಕಾರಿ ಸೌಲಭ್ಯಗಳು ಗಗನ ಕುಸುಮವಾಗಿವೆ. ಆಹಾರ ಇಲಾಖೆಯ ಎಡವಟ್ಟಿನಿಂದಾಗಿ ಸರ್ಕಾರದ ಯೋಜನೆಗಳು ತಮಗೆ ಸಿಕ್ಕಿಲ್ಲ ಎಂದು, ಸುಂಕದ ಕಲ್ಲು ಗ್ರಾಮದ ರೇಣುಕ, ಕೂಡ್ಲಿಗಿ ರಾಜೀವ ಗಾಂದೀನಗರ ವಾಸಿ ಸಲ್ಮಾನ್, 10ನೇ ವಾರ್ಡ್ ವಾಸಿ ಸಿರಿಬಿ ರಮೇಶ ಬೇಸರ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆಯ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಸಧ್ಯ ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಪಡಿತರ ಸೇವೆಗಳು ಸ್ಥಗಿತಗೊಂಡಿದ್ದು, ಸಂಹಿತಿ ಅವಧಿ ಮುಗಿದ ನಂತರದಲ್ಲಿ ಆಹಾರ ಇಲಾಖೆ ನೆನೆಗುದಿಗೆ ಬಿದ್ದಿರುವ ಆಹಾರ ಪಡಿತರ ಅರ್ಜಿಗಳನ್ನು ತುರ್ತಾಗಿ ವಿಲೆವಾರಿ ಮಾಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಮತ್ತು ಛಲಗಾರ ಟಿವಿ ಮಾದ್ಯಮ ಈ ಮೂಲಕ ಆಗ್ರಹಿಸಿದೆ.
ಸರ್ಕಾರ ಅನ್ನಭಾಗ್ಯ ನೀಡಿದೆ ಜೊತೆಗೆ ಗೃಹಲಕ್ಷ್ಮೀ, ಆರೋಗ್ಯ ಸೇರಿದಂತೆ ವಿವಿದ ಪ್ರಮುಖ ಯೋಜನೆಗಳಿಗೆ, ಪಡಿತರ ಚೀಟಿ ಅನಿವಾರ್ಯವಾಗಿದೆ. ಇದರ ಪರಿವೇ ಇಲ್ಲದೆೇ ಆಹಾರ ಇಲಾಖೆ ಸರ್ಕಾರಿ ಸೌಕರ್ಯಗಳನ್ನು ಸಕಾಲಕ್ಕೆ ಒದಗಿಸಬೇಕಾಗಿರುವ ಇಲಾಖೆ, ವರ್ಷಗಳಾದರೂ ಸಾರ್ವಜನಿಕರಿಗೆ ಒದಗಿಸಲಾಗದೇ ಹೊಣೆಗೇಡಿತನ ಮೆರೆದಿರುವುದನ್ನು. ನಾಗರೀಕರು ಹಾಗೂ ಹಲವು ಸಂಘಟನೆಗಳು ಕಠುವಾಗಿ ಖಂಡಿಸಿದ್ದು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಪಡಿತರ ಸೇವೆಗಳ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಿಲು ತಾಲೂಕಾಡಳಿತದ ಕಚೇರಿಯ ಎರೆಡನೇ ಮಳಿಗೆಯಲ್ಲಿರುವ ಇಲಾಖೆ ಕಚೇರಿಗೆ, ವೃದ್ಧರು ಗರ್ಭಿಣಿಯರು ವಿಕಲಾಂಗರು ಸಂಪರ್ಕಿಸುವುದು ದುಸ್ತರವಾಗಿದೆ.
ಮೂಲ ಭೂತ ಸೌಕರ್ಯಗಳಲ್ಲಿ ಪ್ರಮುಖವಾಗಿರುವ, ಆಹಾರ ಸೌಕರ್ಯಗಳನ್ನು ಕಲ್ಪಿಸುವ ಆಹಾರ ಇಲಾಖೆ ಸಾರ್ವಜನಿಕರಿಗೆ ಸುಲಭವಾಗಿ ದೊರಕುವಂತಾಗಬೇಕಿದೆ. ಕಾರಣ ತಹಶಿಲ್ದಾರರು ಜನಪರ ಕಾಳಜಿ ವಹಿಸಿ, ಶೀಘ್ರವೇ ಆಹಾರ ಇಲಾಖೆಯ ಕಚೇರಿಯನ್ನು. ಮೊದಲನೇಯ ಪ್ಲೋರ್ ಅಂದರೆ ನೆಲ ಮಟ್ಟದ, ಮಹಡಿಯಲ್ಲಿನ ಕಟ್ಟಡಕ್ಕೆ ಸ್ಥಳಾಂತರಿಸಿ ಕ್ರಮ ಜರುಗಿಸಬೇಕಿದೆ ಎಂದು. ಜನಪರ ಮಹಿಳಾ ಕಾರ್ಮಿಕರ ರೈತರ, ಮಹಿಳೆಯರ ,ದಲಿತಪರ, ಹಾಗೂ ಕನ್ನಡ ಪರ ಹೋರಾಟಗಾರರು. ಹಲವು ಹೋರಾಟಗಾರರು ಈ ಮೂಲಕ ಒತ್ತಾಯಿಸಿದ್ದಾರೆ.✍️ ನ್ಯೂಸ್ ರಿಪೋರ್ಟ್ ಛಲಗಾರ ಡೆಸ್ಕ್ ಬೆಂಗಳೂರು.