‘ಪ್ರೆಸಿಡೆಂಟ್ ಆಫ್ ಭಾರತ್’ : ವಿಪಕ್ಷಗಳ ತೀವ್ರ ಆಕ್ರೋಶ: ಬಿಜೆಪಿ ನಾಯಕರ ಸಮರ್ಥನೆ.
ನವದೆಹಲಿ: ಇಂಡಿಯಾ’ ಪದ ಅಳಿಸಿ ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸುವ ಯತ್ನದ ಭಾಗ ಇದು ಎಂಬ ಊಹಾಪೋಹ ಆರಂಭವಾಗಿದೆ. ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿದ್ಧಪಡಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರ ಹುದ್ದೆಯನ್ನು ‘ಪ್ರೆಸಿಡೆಂಟ್ ಆಫ್ ಭಾರತ್’ (ಭಾರತದ ಅಧ್ಯಕ್ಷೆ) ಎಂದು ಬರೆಯಲಾಗಿದೆ. ಇದರಲ್ಲಿ ಈವರೆಗೆ ಬಳಸುತ್ತಿದ್ದ ‘ಇಂಡಿಯಾ’ ಪದ ಕಾಣೆಯಾಗಿದೆ. ಅಲ್ಲದೆ, ‘ ಇದು ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಇದರಲ್ಲಿ ಈವರೆಗೆ ಬರೆಯಲಾಗುತ್ತಿದ್ದ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಜಿ20 ಔತಣಕೂಟದ ಆಮಂತ್ರಣ ಪತ್ರಿಕೆ ಟ್ವೀಟ್ ಮಾಡಿದ್ದು, ಅದಕ್ಕೆ ಅವರು ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ’ ಎಂದು ಟ್ವೀಟರ್ನಲ್ಲಿ ಟಿಪ್ಪಣಿ ಬರೆದಿದು, ‘ಜೈ ಹೋ’ ಎಂದಿದ್ದಾರೆ. ‘ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಯತ್ನ ಇದು. ಯಾವತ್ತೋ ಆಗಬೇಕಿತ್ತು. ಇಂದು ಕೈಗೂಡಿದೆ’ ಎಂದಿದ್ದಾರೆ.
ವಿಪಕ್ಷಗಳು-ಬಿಜೆಪಿ ವಾಕ್ಸಮರ:
ಬಿಜೆಪಿಯೇ ಇಂಡಿಯಾ ಶೈನಿಂಗ್, ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ನ್ಯೂ ಇಂಡಿಯಾ ಎಂಬ ಉದ್ಘೋಷಣೆಗಳನ್ನು ಮಾಡಿತ್ತು. ಕೇಂದ್ರದ ಈ ನಡೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಮುಖಂಡ ಜೈರಾಂ ರಂಏಶ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಆರ್ಜೆಡಿ ಮುಖಂಡ ಮನೋಜ್ ಝಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸರ್ಕಾರದ ನಡೆ ಪ್ರಶ್ನಿಸಿದ್ದು, ‘ಹಠಾತ್ತಾಗಿ ದೇಶದ ಹೆಸರು ಬದಲಾವಣೆಗೆ ಕಾರಣ ಏನು? ದೇಶದ ಹೆಸರು ಬದಲಾವನೆ ಮಾಡಲು ಯಾರಿಗೂ ಹಕ್ಕಿಲ್ಲ. ಬಹುಶಃ ವಿಪಕ್ಷಗಳ ಕೂಟದ ‘ಇಂಡಿಯಾ’ ಹೆಸರಿನಿಂದ ಬೆಚ್ಚಿ ಬಿದ್ದು ಹೀಗೆ ಮಾಡಿದ್ದರೇನೋ. ಆದರೆ ದಿಢೀರನೆ ಇಂಡಿಯಾ ಪದ ಕೈಬಿಟ್ಟಿದ್ದು ಏಕೆ?’ ಎಂದಿದ್ದಾರೆ.