ಕೂಡ್ಲಿಗಿ ಪಪಂ ಸಭೆ:ಜನ್ರು ಕಲ್ಲಿಂದ ಹೊಡಿತಾರ.. ಪೂರ್ಯಾನಾಯ್ಕ ಆಕ್ರೋಶ-ವಿಜಯನಗರ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸಭೆ,ಗೆದ್ದು ಈಸು ತಿಂಗಳಾದ್ರೂ ಏನೂ ಕೆಲಸಾಗಿಲ್ಲ ಜನ್ರು ಕಲ್ಲುತಂಗಡು ಹೊಡಿತಾರ..ಎಂದು ಸದಸ್ಯ ಪೂರ್ಯಾನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಅವರು ಸಭೆಯಲ್ಲಿ ಮುಖ್ಯಾಧಿಕಾರಿಯನ್ನ ಪ್ರೆಶ್ನಿಸಿದರು,ಕಾರಣ ಶೀಘ್ರವೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಎಂದು ಒತ್ತಾಯಿಸಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವಾಗ,ಸ್ಥಳೀಯ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸದಸ್ಯ ಕಾವಲ್ಲಿ ಶಿವಪ್ಪನಾಯಕ ಒತ್ತಾಯಿಸಿದರು.ಕೆಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಒದಗಿಸಬೇಕಾಗಿದೆ,ಕೆಲವೆಡೆಗಳಲ್ಲಿ ಸೌಕರ್ಯಗಳು ಮರೀಚಿಕೆಯಾಗಿವೆ ಕಾರಣ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದರು. ವಿವಿದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.ಪಟ್ಟಣದ ವಿವಿದ ವಾರ್ಡ್ ಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ, ವಿಷಯಗಳ ಚರ್ಚೆ ಮಾಡಲಾಯಿತು.ಪಪಂ ಅಧ್ಯಕ್ಷೆ ಶ್ರೀಮತಿ ಎಂ.ಶಾರದಾಬಾಯಿ,ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ ರಾಘವೇಂದ್ರ, ಮುಖ್ಯಾಧಿಕಾರಿ ಫಿರೋಜ್ ಖಾನ್ ವೇದಿಕೆಯಲ್ಲಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-