ಭ್ರಷ್ಟ ಶಿಕ್ಷಕರಿಗೆ, ಭ್ರಷ್ಟಎಸ್ಡಿ ಎಮ್ಸಿ, ಭ್ರಷ್ಟ ರಾಜಕಾರಣಿಗಳಿಗೆ ಹೆದರಬೇಡಿ, ಪ್ರಾಮಾಣಿಕರಾಗಿದ್ದು ಸಂಘಟಿತರಗೋಣ-ಪುಷ್ಪ ಕರೆ-ವಿಜಯನಗರ ಕೂಡ್ಲಿಗಿ ಪ್ರವಾಸಿಮಂದಿರದಲ್ಲಿ,ಫೆ27ರಂದು ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತರ ಜಿಲ್ಲಾ ಸಮಾವೇಶ ಜರುಗಿತು.ಸಮಾವೇಶದ ಲ್ಲಿ ಮುಖಂಡರಾದ ಹರಪನಹಳ್ಳಿಯ ಶ್ರೀಮತಿ ಪುಷ್ಪ ಮಾತನಾಡಿದರು, ಬಿಸಿಯೂಟದವರೆಲ್ಲರೂ ಮೊದಲು ಸಂಘಟಿತರಾಗಬೇಕಿದೆ. ಎಲ್ಲರೂ ಪ್ರಾಮಾಣಿಕತೆಯಿಂದ ಕರ್ಥವ್ಯ ನಿರ್ವಹಿಸಬೇಕು ಹಾಗೂ ನಾವೆಲ್ಲರೂ ಸ್ವಾಭಿಮಾನಿ ಸ್ವಾವಲಂಭಿಗಳಾಗಿರೋಣ. ಈ ಮೂಲಕ ಭ್ರಷ್ಟ ಶಿಕ್ಷಕರ ಮತ್ತು ಭ್ರಷ್ಟ ಎಸ್ಡಿ ಎಮ್ಸಿಯವರ ಕಪಿಮುಷ್ಠಿಯಿಂದ ಮುಕ್ತಿಹೊಂದೋಣ ಎಂದು ಅವರು ಕರೆ ನೀಡಿದರು.
ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರನ್ನ ಊಟ ತಯಾರಿಕೆಯ ಜೊತೆ, ಶಾಲೆಯ ಸ್ವಚ್ಚತೆಗೆ ಹಾಗೂ ಶಿಕ್ಷಕರ ಚಾಕರಿ ಮಾಡೋಕೆ ಮತ್ತು ಇತರೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.ಇದು ಖಂಡನೀಯವಾದದ್ದು,ಈ ಶೋಷಣೆ ನಿಲ್ಲಲೇ ಬೇಕು,ಯಾವುದೇ ಕಾರಣಕ್ಕೆ ಭ್ರಷ್ಟ ರಾಜಕಾರಣಿಗಳಿಗೆ,ಭ್ರಷ್ಟ ಶಿಕ್ಷಕರಿಗೆ,ಭ್ರಷ್ಟ ಎಸ್ಡಿಎಮ್ಸಿಯವರಿಗೆ,ಭ್ರಷ್ಟ ಅಧಿಕಾರಿಗಳಿಗೆ ಹದರಬಾರದು, ಬದಲಿಗೆ ಪ್ರಾಮಾಣಿಕರಾಗಿದ್ದು ಕರ್ಥವ್ಯ ಮಾಡೋಣ ಮತ್ತು ಸಂಘಟಿತರಾಗಿ ಒಂದಾಗೋಣ. ಅದಕ್ಕಾಗಿ ನಾವೆಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಿ, ಸಂಘಟಿತರಾಗೋಣ ಪ್ರಭಲ ಶಕ್ತಿಯಾಗೋಣ ಎಂದರು. ಮುಖಂಡರಾದ ಹಡಗಲಿ ಶ್ರೀಮತಿ ಅನಸೂಯಮ್ಮ, ಕೊಟ್ಟೂರು ಶ್ರೀಮತಿ ರೂಪ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯರಾದ ಜಿಲ್ಲಾಮುಖಂಡರಾದ ಹೆಚ್.ವೀರಣ್ಣ,ಗುಡಾಳು ಹಾಲೇಶ,ಹಲಗಿ ಸುರೇಶ,ಹಡಗಲಿ ಶಿವರಾಜ್,ಎಐವೈಎಫ್ ಮುಖಂಡ ಮರಬನಹಳ್ಳಿ ಕರಿಯಪ್ಪ ವೇದಿಕೆಯಲ್ಲಿದ್ದು ಮಾತನಾಡಿದರು. ಕೂಡ್ಲಿಗಿ ಸಂಘಟನೆ ಅಧ್ಯಕ್ಷೆ ಶ್ರೀಮತಿ ಸರೋಜಮ್ಮ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಟ್ಟೂರು ಹರಪನಹಳ್ಳಿ,ಹಡಗಲಿ,ಕೂಡ್ಲಿಗಿ ಸೇರಿದಂತೆ.ವಿಜಯನಗರ ಜಿಲ್ಲೆಯ ವಿವಿದ ತಾಲೂಕುಗಳ ಬಿಸಿಯೂಟ ಸಂಘಟನೆಯ,ತಾಲೂಕು ಘಟಕಗಳ ಮುಖಂಡರು ಹಾಗೂ ಪದಾದಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ನೂತನ ವಿಜಯನಗರ ಜಿಲ್ಲಾ ಸಮಿತಿಗೆ, ಪ್ರಮುಖ ಪದಾಧಿಕಾರಿಗಳನ್ನು ನೇಮಿಸಲಾಯಿತು. ✍️ ವಂದೇ ಮಾತರಂ ವಿ.ಜಿ.ವೃಷಬೇಂದ್ರ ಕೂಡ್ಲಿಗಿ-