ಇಲ್ಲಿ ಹೆಚ್ಚಾನೆಚ್ಚು ಮಾದಿಗರು ಗುಡಿಸಲುಗಳನ್ನು ತಮ್ಮ ವಸತಿ ನಿವೇಶನ ಗೋಸ್ಕರ ವಸತಿಯಿಲ್ಲದೆ ಹಾಕಿಕೊಂಡಿದ್ದರು ಸುಮಾರು ವರ್ಷಗಳಿಂದ ತಮ್ಮ ಗುಡಿಸಲುಗಳನ್ನು ಹಾಕಿಕೊಂಡಿದ್ದರು, ಇದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯ್ತುರು ಅವರ ಹೆಸರು ಮೇಲೆ ಇರುವಂತಹ ಜಾಗ ಇದರಲ್ಲಿ ಮಾದಿಗರು 50’/, ಪರ್ಸೆಂಟ್ ಮತ್ತು ಇನ್ನುಳಿದ ಎಲ್ಲಾ ಹಲವಾರು ಜನಾಂಗದವರು 50’/, ಪಟ್ಟಿಗೆ ಎಲ್ಲಾ ಜನಾಂಗದವರು ಸೇರಿ 100’/, ವಾಸವಾಗಿದ್ದಾರೆ. ಅಕ್ಷಯ್ ಪಾರ್ಕ್ ನಿಯರ್ ಪ್ರಿಯದರ್ಶನಿ ಕಾಲೋನಿ ಹತ್ತಿರ ಇರುವ ಈ ಜಾಗವನ್ನು ಕೆಲವೊಂದು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ಭೂಗಳ್ಳರು ಇದ್ದಾರೆ. ಮನೆ ಇಲ್ಲದಂತಹ ಪ್ರಜೆಗಳಿಗೆ ಮನೆಗಳನ್ನು ಹಾಕಿಕೊಂಡು ವಾಸಿಸುತ್ತಿದ್ದರೆ.
ಈ ದುರಾಡಳಿತ ಮನೋಭಾವನೆ ಹೊಂದಿರುವ ರವಿ ಬಂಕಾಪುರ ಮತ್ತು ಕೃಷ್ಣ ಕ್ಯಾರಕಟ್ಟಿ ವಲಯ ಕಚೇರಿ 7 ಸಹಾಯಕ ಆಯುಕ್ತರು ಅದ ಪ್ರಕಾಶ್ ಗಾಳಮ್ಮನವರು ಮತ್ತು ಏರಿಯಾದ ಕಾರ್ಪೋರಾದ ಸಂದಿಲ್ ಕುಮಾರ್, ಮೊಮ್ಮಿನ್ ಜ ಮಾದಾರ ಇವರುಗಳು ತಮಗೆ ಬೇಕಾದ ರೀತಿಯಲ್ಲಿ ಸರ್ಕಾರಿ ಭೂಮಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಯವರ ಗಮನಕ್ಕೆ ತಂದರೂ ಸೂಕ್ತವಾದ ಕ್ರಮವನ್ನು ಜರುಗಿಸುತ್ತಿಲ್ಲ ಮೊದಲು ಈ ಜಗವೆಲ್ಲಾ ಗ್ರಾಮೀಣ ಪ್ರದೇಶಕ್ಕೆ ಸೇರಿದ್ದಾಗಿದೆ 15 ವರ್ಷವಾದರೂ ಇನ್ನೂ ಸಿಗುತ್ತಿಲ್ಲ ಏನೋ ಒಂದು ಹೇಳುತ್ತಿದ್ದಾರೆ ವಿನಹ ಬಡವರಿಗೆ ಮನೆ ಆಗ್ತಾಇಲ್ಲ. ಉಳ್ಳವರ ಪಾಲಿಗೆ ಭೂಮಿಯು ಹೋಗ್ತಾಯಿದೆ ವಿನಹ ಬಡವರ ಪಾಲಿಗೆ ಭೂಮಿ ದೊರೆತಿಲ್ಲ. ಇಲ್ಲಿ ಕೇವಲ ಎರಡು ಸಮುದಾಯದವರ ಅಷ್ಟೇ ಈ ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ವಿನಹ ಬೇರೆ ಯಾವ ಜನಾಂಗದವರು ಇಲ್ಲ ಭೋವಿ ಸಮಾಜದವರು ಮತ್ತು ಸಮಗಾರರು ಎರಡು ಸಮುದಾಯದವರು ಈ ಸರ್ಕಾರಿ ಭೂಮಿಯನ್ನು ಕಬ್ಜಾ ಮಾಡಿಕೊಂಡಿದ್ದಾರೆ. ಬಡವರು ದೀನದಲಿತರು ಮತ್ತು ಎಲ್ಲ ಜನಾಂಗದವರು ಸೇರಿ ಹಾಕಿಕೊಂಡಂತಹ ಗುಡಿಸಲುಗಳನ್ನು ನೆಲಸಮಗೊಳಿಸಿ ದಂತ ಕುಖ್ಯಾತ ಭೂ ಕಳ್ಳರು ಈ ಮೇಲೆ ಕಾಣಿಸಿ ಹೆಸರಿನವರು ಬಡವರಿಗೆ ನಿವೇಶನ ದೊರೆಯದಂತೆ ಜೀವ ಬೆದರಿಕ್ಕೆ ಹಾಗೂ ಅಲ್ಲಿ ವಾಸಿಸುವ ಬಡ ಜನರಿಗೆ ಅವರ ಗುಡಿಸಲು ಗಳ ಹತ್ತಿರ ಹೋಗಿ ಶೇಡ್ಡು ಧ್ವಷ ಮಾಡುತ್ತಿದ್ದಾರೆ. ಅಧಿಕಾರಿಗಳ ಮಾತಿಗೆ ಬೆಲೆಕೊಡದೆ ತಮ್ಮದೇ ಆದಂತಹ ದೌರ್ಜನ್ಯವನ್ನು ಎಸಗುತ್ತಿದ್ದಾರೆ. ದೀನದಲಿತರ ಜೀವನವನ್ನು ಲೆಕ್ಕಿಸಿದೆ ಇವರ ದೌರ್ಜನ್ಯವೇ ಹೆಚ್ಚಾಗಿದೆ.