ಬಂಡವಾಳ ಹೂಡಿಕೆ ಹೆಸರಲ್ಲಿ ಕೊಪ್ಪಳದ ರೈತರ ಭೂಮಿ ಲಪಟಾಯಿಸಿದ ಚೀನಾ ಕಂಪನಿಗೆ ಸಾಥ್ ನೀಡಿದ ಸಧಾನಂದಗೌಡ ಹಾಗೂ ಸಂಗಣ್ಣ ಕರಡಿ!
ಇಂದಿಗೆ ನಾಲ್ಕನೆಯ ದಿನದಲ್ಲಿ ಮುನ್ನಡೆದಿರುವ ರೈತ ಹೋರಾಟಕ್ಕೆ ಬೆಂಬಲಿಸಿ!
ಬರಗಾಲದಿಂದ ತತ್ತರಿಸಿದ ಕೊಪ್ಪಳ ಜಿಲ್ಲೆಯ ರೈತರು ಮನಸ್ಸಿಲ್ಲದಿದ್ದರೂ ನೌಕರಿ ಹಾಗೂ ಕೈತುಂಬ ಭೂಪರಿಹಾರ ಸಿಕ್ಕೀತೆಂಬ ಕಾರಣಕ್ಕೆ ಕೇವಲ 80 ಸಾವಿರ ರೂ.ಎಕರೆಯಂತೆ 1300 ಎಕರೆ ಭೂಮಿ ಬಿಟ್ಟು ಕೊಟ್ಟು ಈಗ ಕಕ್ಕಾಬಿಕ್ಕಿಯಾಗಿದ್ದರೆ.ಅತ್ತ ಸೂಕ್ತ ಪರಿಹಾರವೂವ ಸಿಗದೆ, ಇತ್ತ ನೌಕರಿ ಭರವಸೆಯೂ ಈಡೇರದೆ,ಬಿಡಿಗಾಸಿಗೆ ಕೊಟ್ಟ ತಮ್ಮ ಭೂಮಿ ಈಗ 1 ಕೋಟಿಗೆ 1 ಎಕರೆಯಂತೆ ಮಾರಾಟವಾಗುತ್ತಿರುವ ವಿಷಯ ತಿಳಿದು ಕನಾ೯ಟಕ ರೈತ ಸಂಘ(AIKKS)ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಹೂಡಿ , ಭೂಮಿ ವಾಪಸ್ ಕೊಡಿಸುವಂತೆ ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
2011 ರಲ್ಲಿ ಬಿಜೆಪಿ ಸರಕಾರ ನಡೆಸಿದ್ದ ಜಾಗತೀಕ ಬಂಡವಾಳಿಗರ ಸಭೆಗೆ ಬಂದಿದ್ದ ।ಚೀನಾ ನ್ಯಾಷಿನಲ್ ಮೆಟಲ್ಸ್ ಪ್ರಾಡಕ್ಟ್ಸ್, ಮತ್ತೊಂದು ಚೀನಾ ಕಂಪನಿ ಜಿಂಗ್ ಜಿಂಗ್। ಗಳ ಜತೆ ಬಿಜೆಪಿಯ ಮುಖಂಡರಿಗೆ ಸೇರಿದ ।ಮನಸಾರ ಇನ್ವೆಸ್ಟ್ಮೆಂಟ್ ಹಾಗೂ ಕೆಲಚಂದ್ರ ಗ್ರೂಪ್ -ಸಿಗ್ಮಾ ಮಿನ್ಮೆಟ್। #XINDIA ಎಂಬ ಜಾಯಿಂಟ್ ವೆಂಚರ್ ಮೂಲಕ ಕೊಪ್ಪಳದ ರೈತರಿಗೆ ಗಾಳ ಹಾಕಿವೆ.ಕೊಪ್ಪಳದಲ್ಲಿಯೆ 8735 ಕೋಟಿ ಬಂಡವಾಳ ಹೂಡಿ ಪ್ರತಿದಿನ 2.5 mtpa ಉಕ್ಕಿನ ಅದಿರು ಹರಿಯುವ ಸಾಮಥ್ಯ೯ದ ಉಕ್ಕಿನ ಕಾಖಾ೯ನೆ ಹಾಕಿ ಭೂಸಂತ್ಸ್ತರು ಸೇರಿದಂತೆ ಜಿಲ್ಲೆಯ ಸಾವಿರಾರು ಯವಕರಿಗೆ ಉದ್ಯೋಗ ಕೊಡುತ್ತೇವೆಂದು ಕುಣಿಕೇರಿ,ಹಿರೇಬಗನಾಳ್,ಲಂಚನಕೇರಿ , ಚಿಕ್ಕಬಗನಾಳ್ ಗ್ರಾಮದ 1300 ಎಕರೆ ಭೂಮಿಯನ್ನು ಸ್ವಾಧೀನದ ಹೆಸರಲ್ಲಿ ಖರೀಧಿಸಿದ್ದಾರೆ. #XINDIA ಎಕ್ಸ್ ಇಂಡಿಯಾ ಸ್ಟೀಲ್ ಲಿಮಿಟೆಡ್ ಹೆಸರಲ್ಲಿ 300 ಎಕರೆ ಹಾಗೂ ಸ್ಥಳಿಯ ದಲ್ಲಾಳಿಗಳ ಮುವ್ವರ ಹೆಸರಲ್ಲಿ 900 ಎ.ನೊಂದಣಿ ಮಾಡಿಸಿದ್ದಾರೆ.165 ರೈತರಿಗೆ ಕಂಪನಿ ಕೆಲಸ ಗ್ಯಾರೆಂಟಿಯ ಬಾಂಡ್ ಪೇಪರ್ ನೀಡಿದ್ದಾರೆ. ಭೂಮಿ ಕೊಟ್ಥು 11 ವಷ೯ಗಳಾದರೂ ಒಬ್ಬೆ ಒಬ್ಬ ರೈತನ ಮಗನಿಗೆ ಕೆಲಸ ಕೊಟ್ಟಿಲ್ಲ.200 ಎಕರೆಯಲ್ಲಿ ಸ್ಟೀಲ್ ಪರಷ್ಕರಣಾ ಘಟಕ ಇಟ್ಟುಕೊಂಡು ,ಅಲ್ಲಿ ಹೊರ ರಾಜ್ಯದ 150 ಗುತ್ತಿಗೆ ಕಾಮಿ೯ಕರನ್ನಿಟ್ಟು ಕೊಂಡು ಉಳಿದ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಡಿ ಬಿಟ್ಟಿದ್ದಾರೆ.ಕೆಲಸ ಕೇಳಿದರೆ ಕೈಕಾಲು ಮುರಿದ್ಹಾಕಲು ಗೂಂಡಾಗಳನ್ನು ಸಾಕಿದ್ದಾರೆ!
ದೇಶಪ್ರೇಮ ಭಾರತ ಮಾತಾಕೀ ಜೈ ಎನ್ನುತಲೆ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸಧಾನಂದಗೌಡ ಹಾಗೂ ಸಂಸದ ಕರಡಿ ಸಂಗಣ್ಣ ಚೀನಾ ದೇಶದ ರಾಯಭಾರಿ ಝಾಂಗ್ ಯನ್ ಜತೆ 24-8-2011 ರಂದು ಬೆಂಗಳೂರಿನ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಕೊಪ್ಪಳ ಭೂ ಸ್ವಾಧೀನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈಗ ಇವರದೆ ಸರಕಾರ ಇದೆ.ಈ ಭೂಮಿಯಲ್ಲಿ ಕಾಖಾ೯ನೆಯೂ ಇಲ್ಲ.ಉದ್ಯೋಗವಂತೂ ಸಾಧ್ಯವೆ ಇಲ್ಲ.ಇದೆಲ್ಲ ಗೊತ್ತಿದ್ದೂ ರೈತರು ಆರಂಭಿಸಿದ “ನಮ್ಮ ಭೂಮಿ ನಮಗೆ ವಾಪಸ್ ಕೊಡಿ” ಎಂಬ ಹೋರಾಟಕ್ಕೆ ತಮಗೇನು ಗೊತ್ತಿಲ್ಲ ಎಂಬಂತೆ ರಾಜ್ಯ ಸರಕಾರ ಕುಂತು ಬಿಟ್ಟಿದೆ.
ರೈಲು, ರಾಷ್ಟ್ರೀಯ ಹೆದ್ದಾರಿ,ತುಂಗಭದ್ರಾ ಜಲಾಶಯ ಮತ್ತು MSPL ಎರೊಡ್ರಾಮಗಳಿಂದಾಗಿ ಈ ಭೂಮಿಗೆ ಈಗ ಬಾರಿ ಬೆಲೆ ಬಂದಿದೆ.
ಜಾಗತಿಕ ಬಂಡವಾಳ ಹೂಡಿಕೆಯ ಹೆಸರಲ್ಲಿ ಬಿಜೆಪಿಯ ‘ದೇಶಭಕ್ತರು’ ನಡೆಸುತ್ತಿರುವ ಅಂತರಾಷ್ಟ್ರೀಯ ರಿಯಲ್ ಎಸ್ಟೇಟ್ ಮತ್ತೊಂದು ಹಗರಣ ಹೊರ ಬಿದ್ದಿದೆ.
ಇದುವರೆಗೆ ಹಾಗೂ ಮೊನ್ನೆ ಮೊನ್ನೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದ ಹೆಸರಲ್ಲಿ ಸರಕಾರ ಇದೇ ದಂಧೆ ನಡೆಸಿಲ್ಲ ಎನ್ನಲೂ ಸಾಧ್ಯವಿಲ್ಲದಂತಾಗಿದೆ.
ಹಾಗಾಗಿ, ಕೊಪ್ಪಳದ ರೈತರ ಈ ಹೋರಾಟ ಬಹಳ ಮಹತ್ವದ್ದಾಗಿದೆ.ಇದಕ್ಕೆ ನಿಜವಾದ ಬದಲಾವಣೆ ಬಯಸುವ ಎಲ್ಲರೂ ಈ ಹೋರಾಟವನ್ನು ಗೆಲ್ಲಿಸಲು ಬಲ ತುಂಬ ಬೇಕಾಗಿದೆ.
ಹೊರಗೆ ಚೀನಾವನ್ನು ಹೀಯಾಳಿಸುವ ಈ ಮೋದಿ ಮಂದೆ ,ಒಳಗೆ ಹೇಗೆ ಹೂಂಗ್ ಜತೆ ಒಂದಾಗಿದ್ದಾರೆಂದು ಜನ ಅಥ೯ ಮಾಡಿಕೊಳ್ಳುವುದರ ಜತೆ ಚೀನಾ ಸರಕಾರವೂ ಸಾಮ್ರಾಜ್ಯವಾದಿಯಾಗಿದೆ ಎಂದು ತಿಳಿಯ ಬೇಕಾಗಿದೆ.ಪ್ರಪಂಚ ಕಾಮಿ೯ಕ ವಗ೯ದ ಕ್ರಾಂತಿಕಾರಿ ದಾರಿ ಬಿಟ್ಟು 1976 ರಲ್ಲಿಯೆ ಚೀನಾ ಬಂಡವಾಳಶಾಹಿ ಮಾಗ೯ದಲ್ಲಿ ಸಾಗುತ್ತಾ ಬಂದಿದೆ.ಇದನ್ನು ನಿಜವಾದ ಕಮ್ಯುನಿಸ್ಟ್ ಶಕ್ತಿಗಳು ಮಾತ್ರ ವಿರೋಧಿಸುತ್ತಿವೆ.
ಆರ್.ಮಾನಸಯ್ಯ
ಪಾಲಿಟಿ ಬ್ಯೂರೊ ಸದಸ್ಯ
ಸಿಪಿಐ (ಎಂಎಲ್) ಕನಾ೯ಟಕ
5-6-2022