ಭಜರಂಗದಳ ಮುಖಂಡನಿಂದ ಹತ್ಯೆಯಾದ ಧರ್ಮಸ್ಥಳದ ದಲಿತ ಸಹೋದರ ದಿನೇಶ್ ಕನ್ಯಾಡಿ ಮನೆಗೆ ಎಸ್ ಡಿಪಿಐ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ನೇತೃತ್ವದ ನಿಯೋಗ ಭೇಟಿ.
ಬೆಳ್ತಂಗಡಿ: ಭಜರಂಗದಳದ ಮುಖಂಡನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಹತ್ಯೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸಮೀಪದ ಕನ್ಯಾಡಿಯ ದಲಿತ ಸಮುದಾಯದ ಯುವಕ ದಿನೇಶ್ ರವರ ಮನೆಗೆ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ನೇತ್ರತ್ವದ ತಂಡವು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಘಟನೆಯ ಮಾಹಿತಿ ಪಡೆದು ಧೈರ್ಯ ತುಂಬಿದರು,ನಂತರ ಸ್ಥಳದಿಂದಲೇ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸರಕಾರದಿಂದ ನೀಡಬೇಕಾದ ಪರಿಹಾರ ಮೊತ್ತವನ್ನು ಕೂಡಲೇ ದೊರೆಕಿಸಿಕೊಡಲು ಆಗ್ರಹಿಸಲಾಯಿತು.
ಸ್ಥಳೀಯ ಸಂಘಪರಿವಾರದ ಕೆಲವು ಮುಖಂಡರು ಸಂತ್ರಸ್ತ ಕುಟುಂಬಕ್ಕೆ ಒತ್ತಡ ಹೇರುತ್ತಿರುವ ಮಾಹಿತಿ ಪಡೆದ ನಿಯೋಗವು ಈ ಬಗ್ಗೆ ಯಾವುದೇ ಭಯಪಡದೇ ಇಂತಹ ಒತ್ತಡ ಗಳು ಬಂದಲ್ಲಿ ಪಕ್ಷದ ಸ್ಥಳೀಯ ಮುಖಂಡರ ಗಮನಕ್ಕೆ ತಂದರೆ ಕೂಡಲೇ ಕಾನೂನು ರೀತಿಯ ಹೋರಾಟ ನಡೆಸಲು ಪಕ್ಷ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದರು. ಪಕ್ಷದ ವತಿಯಿಂದ ಮೃತ ದಿನೇಶ್ ಪತ್ನಿಗೆ ಧನಸಹಾಯ ನೀಡಲಾಯಿತು. ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು, ಕ್ಷೇತ್ರಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಮುಖಂಡರಾದ ನವಾಝ್ ಕಟ್ಟೆ,ಹೈದರ್ ನೀರ್ಸಾಲ್,ನಿಝಾಮ್ ಗೇರುಕಟ್ಟೆ, ಹನೀಫ್ ಪೂಂಜಲಕಟ್ಟೆ ಮತ್ತಿರರು ಜೊತೆಯಲ್ಲಿದ್ದರು.