ವಿಜಯನಗರ (ಕೊಟ್ಟೂರು) ಕೋಗಳಿ.ಗ್ರಾಮ ಸಭೆಯಲ್ಲಿ ಆಕ್ರೋಶಗೊಂಡ ವಸತಿ ನಿರಾಶ್ರಿತ ಮಹಿಳೆ.ಕೊನೆಗೂ ಗ್ರಾಮಸಭೆಯಲ್ಲಿ ಹೇಸರು ಕೂಗಲಿಲ್ಲ,
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಏರಡನೇ ಬಾರಿ ಕರೆದ ಗ್ರಾಮ ಸಭೆಯಲ್ಲಿ ನೆಡದ ಫಲಾನುಭವಿಗಳ ಆಯ್ಕೆಯಲ್ಲಿ ಪಟ್ಟಿಯಲ್ಲಿ ಈಕೆಯನ್ನು ಕೈ ಬಿಟ್ಟದ್ದರು, ಈಗಾಗಲೇ ೨೦೧೮ ರಲ್ಲಿ ಈಕೆಯ ಹೆಸರನ್ನು ಫಲಾನುಭವಿಗಳ ಆಯ್ಕೆ ಮಾಡಿ, ಅನುಮೋದನೆ ಆಗಿದೆ ಎಂದು ಜ ೧೪ರಂದು ಪಂಚಾಯತಿ ಅಧಿಕಾರಿಗಳು ಒಂದಿ ಹೇಳಿ ಈಗ ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟಿದಕ್ಕೆ ,
ಆಕ್ರೋಶ ಗೊಂಡು ಪಂಚಾಯತಿ ಮುಂದೆ ಪ್ರತಿಭಟನೆ ಗೆ ಕೂತಳು.
ಮನೆಯಿಂದ ಪಾತ್ರೆ ,ಹಾಸಗೆ ದಿಂಬು ನೀರಿ ಕೊಡ ತಂದು ಪ್ರತಿಭಟನೆ ಮಾಡಿದಳು. ಆದ್ರೇ ಅಧಿಕಾರಿಗಳು ಮಾತ್ರೀ ನಿರಾಶ್ರಿತ ಮಹಿಳೆಯನ್ನು ಕ್ಯಾರೇ ಅನನ್ನಲಿಲ್ಲ.
ನನಗೆ ಈ ಸಲವಾದರು ಸರ್ಕಾರದ ದಿಂದ ಮನೆಕೊಡಿ, ಗಂಡಹೃದಯ ಗಾತದಿಂದ ತೀರಿ ೧೧ ವರ್ಷ ಕಳೆದಿದೆ. ಒಂಟಿ ಹೆಂಗಸು ಬೇರೆ, ಮಕ್ಕಳ ಶಿಕ್ಷಣ ಒಂದು ಕಡೆ, ಬಡತನ ಇನ್ನೊಂದು ಕಡೆ ಬೆನ್ನು ಹತ್ತಿದೆ ಎನ್ನುವ ಈಕೆಗೆ ,
ಮಳೆಯಿಂದ ಶೀತಲಗೊಂಡು ಮನೆ ಬಿದ್ದಿರೋ,ಎರಡು ಮಕ್ಕಳ ಜೊತೆ ವಯಸ್ಸಾದ ಅಜ್ಜಿ ಕಂಟಿಕೊಂಡು ಜೀವನ ಮಾಡುತ್ತಿದ್ದಾಳೆ,
ಇನ್ನೂ ಉಳಿದಿರೋ, ಮನೆಯ ಕಟ್ಟೆಯ ಮೇಲೆ, ಆರು ವರ್ಷಗಳಿಂದ ಜೀವನ ಮಾಡುವ ಈ ವಸತಿ ನಿರಾಶ್ರಿತ ಮಹಿಳೆಗೆ ಸರ್ಕಾರ ಆಶ್ರಯ ನೀಡಬೇಕು.
ಇನ್ನೂ ಈ ಕುಟುಂಬ ಸುಮಾರು ೩೦ ವರ್ಷಗಳಿಂದ
ಗ್ರಾಮ ಪಂಚಾಯತಿಯಿಂದ ಇದುವರೆಗೆ ಯಾವುದೇ ಸೌಲಭ್ಯಗಳನ್ನು ಪಡೆದಿಲ್ಲ.
ಇನ್ನು, ಮನೆಯಲ್ಲ ಬಿದ್ದು ತ್ಯಾಜ್ಯವಾಗಿದೆ. ಇಲ್ಲಿ ಹಾವು ಚೇಳುಗಳ ಕಾಟ ಬೇರೆ ಹೆಚ್ಚಾಗಿದೆ. ಭಯದಿಂದ ಜೀವನ ಮಾಡೋ ಈಕೆಗೆ ಮನೆಯ ಕಟ್ಟೆಗಳೆರಡು ಆಶ್ರಯ ವಾಗಿದೆ.
ಇನ್ನೂ ಮನೆಗಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಕಚೇರಿಯಿಂದ ಗ್ರಾಮಪಂಚಾಯತಿ ಮಟ್ಟದವರೆಗೂ ವಸತಿಗಾಗಿ ಬೇಡಿಕೊಂಡರು
ಅಧಿಕಾರಿಗಳು ಕಿವಿ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.
ಜನ ಪ್ರತಿನಿಧಿಗಳು ಕೂಡಾ ಮೌನವಾಗಿದ್ದಾರೆ.
ಕಂಡು ಕೇಳದ ಹಾಗೆ ಅಧಿಕಾರಿಗಳ ಮೌನವಾಗಿದ್ದು ಏಕೆ ಎಂಬ ಪ್ರಶ್ನೆ ಶುರುವಾಗಿದೆ. ಅಧಿಕಾರಿಗಳು ಮಾತ್ರ ಯಾರ ಕೈಗೊಂಬೆಯಾಗಿದ್ದಾರೆ ಎಂಬ ದಟ್ಟವಾದ
ಪ್ರಶ್ನೆ ಎದ್ದುಕಾಣುತ್ತೆ.
೨೦೧೭_೧೮ರಿಂದಲು ಲೋಕಾಯುಕ್ತರಿಗೆ,ಜಿಲ್ಲಾಪಂಚಾಯಿ,ತಾಲೂಕು ಪಂಚಾಯತಿ ಗೆ ಗಮನಕ್ಕೆ ತಂದರು, ಗ್ರಾಮ ಪಂಚಾಯತಿ ಅಧಿಕಾರಿಗಳ ಏನು ಸ್ಥಳ ಪರಿಶೀಲನೆ ಮಾಡಿಲ್ಲ.
ವೋಟಿಗಾಗಿ ಕೈ ಮುಗಿತ್ತಾರೆ. ಈಗ ನಮ್ಮ ಕಷ್ಟ ಹೇಳಿದರೆ ಕೈ ಹಿಡಿಯುವರು ಯಾರು ಇಲ್ಲ ಅನ್ನೋ ಅಕ್ರಂದನಾ ಕೇಳಿ ಬರುತ್ತೆ.