ಬೆಂಗಳೂರು : ಸರಕಾರದ ಮನವಿಗೂ ಮಣಿಯದ ಕನ್ನಡ ಮತ್ತು ರೈತ ಸಂಘಟನೆಗಳು ಶುಕ್ರವಾರ (ಸೆ.29) ‘ಕರ್ನಾಟಕ ಬಂದ್’ ಆಚರಿಸಲು ಕರೆ ಕೊಟ್ಟಿವೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವೇರಿ ಹೋರಾಟದ ಕಾವು ತೀವ್ರಗೊಳ್ಳುತ್ತಲೇ ಇದ್ದು, ರಾಜ್ಯದ ರೈತರ ಹಿತ ಕಾಯಲು ಬದ್ಧರಾಗಿದ್ದು, ಬಂದ್ ನಿರ್ಧಾರ ಕೈಬಿಡಿ,” ”ಬಂದ್ನಿಂದ ರಾಜ್ಯ ಸರಕಾರಕ್ಕೆ ನಷ್ಟವಾಗಲಿದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರಿಗೆ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ನೀರು ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಎಂದು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಮನವಿಗೆ ಸೊಪ್ಪು ಹಾಕದ ಸಂಘಟನೆಗಳು, ”ಬಂದ್ ನಿರ್ಧಾರ ಅಚಲ,” ಎಂಬ ಸಂದೇಶ ರವಾನಿಸಿವೆ.
ರಾಜ್ಯ ಸ್ತಬ್ಧವಾಗುವುದು ಬಹುತೇಕ ನಿಶ್ಚಿತವಾಗಿದೆ.
ಬಂದ್ ಹಿನ್ನೆಲೆಯಲ್ಲಿಆಸ್ಪತ್ರೆ, ಔಷಧ ಮಾರಾಟ ಮಳಿಗೆಗಳು, ಹಾಲು, ದಿನಸಿ, ತರಕಾರಿ, ದಿನಪತ್ರಿಕೆ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹಾಗೂ ನೂರಾರು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದು, ಶುಕ್ರವಾರ ಇಡೀ ರಾಜ್ಯ ಸ್ತಬ್ಧವಾಗುವುದು ಬಹುತೇಕ ನಿಶ್ಚಿತವಾಗಿದೆ.
ಶಾಲಾ ಕಾಲೇಜು ,ಸರ್ಕಾರಿ ಕಚೇರಿಗಳಿಗೆ, ಅನಿಶ್ಚಿತತೆ
ಬೆಂಗಳೂರು ಬಂದ್ ಸಂದರ್ಭದಲ್ಲಿ ಸರಕಾರಿ, ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈಗ ಕರ್ನಾಟಕ ಬಂದ್ ವೇಳೆ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ ನೀಡಲಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ಮುಂದುವರಿದಿದೆ. ಬ್ಯಾಂಕ್ಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ಕಚೇರಿಗಳ ವಿಚಾರದಲ್ಲಿ ಅನಿಶ್ಚಿತತೆಯಿದ್ದು, ಸಂದರ್ಭ ಅನುಸಾರ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಕನ್ನಡ ಸಂಘಟನೆಗಳ ಒಕ್ಕೂಟವು ಬಂದ್ಗೆ ಬೆಂಬಲ ನೀಡುವಂತೆ ರಾಜ್ಯ ಸರಕಾರಿ ನೌಕರರ ಸಂಘದೊಂದಿಗೆ ಮಾತುಕತೆ ನಡೆಸಿದೆ. ಸರಕಾರಿ ಸಾರಿಗೆ ನಿಗಮಗಳ ಕಾರ್ಮಿಕ ಒಕ್ಕೂಟಗಳು ಬಂದ್ನ ವಿಚಾರವಾಗಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ರಾಜ್ಯದೆಲ್ಲೆಡೆ ಹೆದ್ದಾರಿಗಳು ಬಂದ್
ಬೆಂಗಳೂರು-ಹೊಸೂರು ಮುಖ್ಯರಸ್ತೆ, ಬೆಂಗಳೂರು-ಹೈದರಾಬಾದ್ ಹೆದ್ದಾರಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ತುಮಕೂರು ಹೆದ್ದಾರಿ, ಬೆಂಗಳೂರು-ಕನಕಪುರ ರಸ್ತೆ ಮತ್ತು ಮಂಡ್ಯ, ರಾಮನಗರ, ಮೈಸೂರಿನ ಪ್ರಮುಖ ರಸ್ತೆಗಳ ತಡೆಗೆ ಸಂಘಟನೆಗಳು ಯೋಜನೆ ರೂಪಿಸಿವೆ. ರಾಜ್ಯದೆಲ್ಲೆಡೆ ಶುಕ್ರವಾರ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಬಂದ್ನ ಬಿಸಿ ಹೆಚ್ಚಿಸಲು ಸಂಘಟನೆಗಳು ನಿರ್ಧರಿಸಿವೆ.
ಕನ್ನಡ ಚಿತ್ರರಂಗ ನಟ ನಟಿಯರು ಪ್ರತಿಭಟನೆಯಲ್ಲಿಭಾಗಿಯಾಗುತ್ತಾರೆ.
ಸೆ.29ರ ಕರ್ನಾಟಕ ಬಂದ್ ಬಹಳ ಮುಖ್ಯವಾದದ್ದು. ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತವಲ್ಲ, ರಾಜ್ಯದೆಲ್ಲೆಡೆ ಬಂದ್ ನಡೆಯಲಿದೆ. ರಾಜ್ಯ ಬಂದ್ಗೆ ಪೂರ್ವಭಾವಿಯಾಗಿ ಬೆಂಗಳೂರಿನ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆದವು. ತೆರೆದ ವಾಹನದಲ್ಲಿ ರ್ಯಾಲಿಯಲ್ಲಿ ನಡೆಸಿದ ವಾಟಾಳ್ ನಾಗರಾಜ್, ”ಕರ್ನಾಟಕ ಬಂದ್ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್, ಶಾಪಿಂಗ್ ಮಾಲ್ಗಳು, ಅಂಗಡಿಗಳನ್ನು ಬಂದ್ ಮಾಡಬೇಕು,” ಎಂದು ಮನವಿ ಮಾಡಿದರು. ‘ರಾಜ್ಯದ ಜನರಿಗಾಗಿ ನಾವು ಅನೇಕ ಬಂದ್ಗೆ ಬೆಂಬಲ ನೀಡಿದ್ದೇವೆ. ಟೋಲ…, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿದೆ. ಬೆಂಗಳೂರಿನ ಟೌನ್ಹಾಲ…ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರಾರಯಲಿ ನಡೆಸುತ್ತೇವೆ. ಕನ್ನಡ ಚಿತ್ರರಂಗ ನಟ ನಟಿಯರು ಪ್ರತಿಭಟನೆಯಲ್ಲಿಭಾಗಿಯಾಗುತ್ತಾರೆ. ಸರಕಾರ ಪೊಲೀಸ್ ಬಲ ಬಳಸಿ ಕನ್ನಡ ಚಿತ್ರರಂಗ ನಟ ನಟಿಯರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ರ್ಯಾಲಿಗೆ ತಡೆಯೊಡಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ,” ಎಂದು ಗುಡುಗಿದರು.
ರಾಜ್ಯ ಪೊಲೀಸರು ಸನ್ನದ್ಧರಾಗಿದ್ದಾರೆ.
ಶುಕ್ರವಾರ ಬಂದ್ ಇರುತ್ತೋ ಇಲ್ಲವೋ ಗೊತ್ತಿಲ್ಲ. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ. ”ಬೆಂಗಳೂರು ಬಂದ್ ಸಂದರ್ಭದಲ್ಲಿ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಎಲ್ಲಾ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಶಾಂತಿಯುತ ಬಂದ್ ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗುವುದು,” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯ ಬಂದ್ ಶೇ.100ರಷ್ಟು ಯಶಸ್ವಿಯಾಗಲಿದೆ. ಶಾಂತಿಯುತವಾಗಿ ಚಳವಳಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ರಾಜ್ಯದಾದ್ಯಂತ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸಿವೆ. ಎಂದು ಕನ್ನಡ ಚಳವಳ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಏನೆಲ್ಲಾ ಸೇವೆ ಇರಲ್ಲ?
- ಬೀದಿ ಬದಿ ವ್ಯಾಪಾರ
- ಹೋಟೆಲ್ಗಳು
- ಚಿತ್ರಮಂದಿರಗಳು
- ಮಾಲ್ಗಳು
- ಖಾಸಗಿ ಬಸ್
- ಆಟೊ
- ಓಲಾ-ಉಬರ್ ಸೇವೆ
- ಕಾರ್ಮಿಕ ಆಧಾರಿತ ಕೆಲಸಗಳು
- ಸರಕು ಸಾರಿಗೆ ಸೇವೆ
- ಮಾರುಕಟ್ಟೆಗಳು
ಯಾವೆಲ್ಲಾಇರುತ್ತೆ?
- ಆಸ್ಪತ್ರೆ
- ಔಷಧಾಲಯ
- ಆಂಬ್ಯುಲೆನ್ಸ್ ಸೇವೆ
- ಮೆಟ್ರೋ ರೈಲು
- ಹಾಲಿನ ಮಳಿಗೆಗಳು
ಇವುಗಳೆಲ್ಲಾ ಅನಿಶ್ಚಿತ
- ಸರಕಾರಿ ಕಚೇರಿಗಳು
- ಶಾಲಾ-ಕಾಲೇಜುಗಳು
- ಕೆಎಸ್ಆರ್ಟಿಸಿ-ಬಿಎಂಟಿಸಿ ಬಸ್ ಸೇವೆ .