ಆತ್ಮೀಯ ವಾಯುವ್ಯ ಪದವೀಧರ ಮತದಾರ ಬಂಧುಗಳೇ,
ಶ್ರೀ ಆರ್ ಆರ್ ಪಾಟೀಲರು ಒಬ್ಬ ಬಿಬಿಎ ಪದವೀಧರರಾಗಿದ್ದು ಅನೇಕ ಸವಾಲುಗಳನ್ನು ಸ್ವೀಕರಿಸುತ್ತಾ ಅಡ್ಡಿ-ಆತಂಕಗಳನ್ನು ಸದೆಬಡೆದು ಛಲಂದಕ ಮಲ್ಲನಂತೆ ನಿಂತು ಎಲ್ಲರೊಳಗೂ ತಾನಾಗಿ ತನ್ನೊಳಗೆ ಎಲ್ಲರನ್ನು ಅರಿತುಕೊಂಡು ಹೋಗುವ ವಿಶೇಷ ವ್ಯಕ್ತಿ ಎನ್ನುವುದು ಸತ್ಯ. ಇವತ್ತಿಗೂ ಅವರು ಏಳಿಗೆಯನ್ನು ಸಹಿಸದ, ಕೆಲವು ಸಹಕಾರಿ ಕ್ಷೇತ್ರದ ವ್ಯಕ್ತಿಗಳಿಂದ ತೊಂದರೆಗೋಳ ಪಟ್ಟರು ಸಮಾಜಕ್ಕೆ ಸತ್ಯವೇನೆಂದು ತೋರಿಸಿಕೊಡಲು ಪಣತೊಟ್ಟಿದ್ದಾರೆ,ಅದಲ್ಲದೇ ಯಾರನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬೇಡಿ ಎನ್ನುವ ಬುದ್ಧನ ತತ್ವಕ್ಕೆ ಅಂಟಿಕೊಂಡು, ಕಾಯಕವೇ ಕೈಲಾಸ ಎಂದು ಸಾರಿಸಾರಿ ಹೇಳಿದ ಬಸವಣ್ಣನ ತತ್ವಹೊದ್ದುಕೊಂಡು, ಏನೇ ಬರಲಿ ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂದು ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರರು ದೇಶಕ್ಕೆ ಕೊಟ್ಟ ಪವಿತ್ರ ಸಂವಿಧಾನದಲ್ಲಿ ನಂಬಿಕೆ ಇಟ್ಟು, ಜೀವನದ ಪಯಣದಲ್ಲಿ ಸಮಾಜಕ್ಕೆ ಏನಾದರೂ ಒಂದು ಫಲಭರಿತವಾದ ಕಾರ್ಯ ಮಾಡಲೇಬೇಕೆಂಬ ಅಚಲ ನಿರ್ಧಾರದೊಂದಿಗೆ, ಜಾಗೃತ, ಪ್ರಭುದ್ಧ,ಮತ್ತು ಬುದ್ಧಿಜೀವಿಗಳಾದ ತಮ್ಮೆಲ್ಲರ ಬೆಂಬಲದೊಂದಿಗೆ ಯಶಸ್ವಿಯಾಗಲೆ ಬೇಕೆಂದು ನಿರ್ಧರಿಸಿ, ಈ ಒಂದು ಮಹತ್ತರ ಚುನಾವಣೆಯಲ್ಲಿ ನಿಮ್ಮ ಮನೆಯ ಮಗನಾಗಿ, ಸಹೋದರನಾಗಿ,ಸ್ಪರ್ಧಿಸಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧ ಕ್ಷೇತ್ರಗಳಾದ ಶೈಕ್ಷಣಿಕ ವೈದ್ಯಕೀಯ, ಕಾನೂನು, ಸಹಕಾರಿ, ಆರಕ್ಷಕ ಮತ್ತು ಕೃಷಿ ಅಂತಹ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪದವಿಧರ ಸಹೋದರ, ಸಹೋದರಿಯರಿಗೆ ಅನುಕೂಲವಾಗುವ ಧ್ಯೇಯೋದ್ದೇಶ ಗಳಾದ,
1.ಪ್ರಾದೇಶಿಕವಾಗಿ ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯರಿಗೆ ಆದ್ಯತೆ ಸಿಗುವಂತೆ ಹೋರಾಡುವುದು.
2. ನಮ್ಮ ನಾಡು,ನಮ್ಮ ದೇಶ ಕಂಡ ಸತ್ಯಶುದ್ಧ ಕಾಯಕವಾದ ಕೃಷಿ ಕ್ಷೇತ್ರವನ್ನು ಪ್ರಗತಿ ಗೊಳಿಸಲು ಹೆಚ್ಚು ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಒತ್ತಾಯ ಮಾಡುವುದು.
3. ಕೃಷಿಕ್ಷೇತ್ರವು ಕೂಡ ಒಂದು ಕೈಗಾರಿಕಾ ಕ್ಷೇತ್ರವೆಂದು ಪರಿಗಣಿಸಿ ಕೃಷಿಯಲ್ಲಿ ತೊಡಗುವ ಪದವೀಧರರಿಗೆ ಗುಂಡೂರಾವ್ ಸರ್ಕಾರದಲ್ಲಿ ಕೊಟ್ಟ ಸ್ಟೈಪೆಂಡರಿ ಸ್ಕೀಮ್ ನಂತೆ,ಕನಿಷ್ಠ ಮಾಸಿಕ 10000/- ಸಂಬಳ ಕೊಟ್ಟು, ನಾಡಿನಲ್ಲಿ ಖಾಲಿ ಬಿದ್ದ ಅನೇಕ ಸರ್ಕಾರಿ ಭೂಮಿಗಳಲ್ಲಿ ಔಷಧೀಯ ಗಿಡಗಳನ್ನು ಮತ್ತು ಶ್ರೀಗಂಧದ ಮರಗಳನ್ನು ಬೆಳೆಯುವ ಯೋಜನೆಯ ಮುಖಾಂತರ ಪದವಿಧರ ಯುವಕರನ್ನು ತೊಡಗಿಸಿಕೊಳ್ಳವುದರ ಬಗ್ಗೆ ಪರಿಷತ್ತಿನಲ್ಲಿ ಧ್ವನಿ ಏತ್ತುವುದು.
4. ಕೃಷಿ ಗಾಗಿ ಸಮಗ್ರ ನೀರಾವರಿ ಮುಖಾಂತರ, ಹೊಸ ತಂತ್ರಜ್ಞಾನದೊಂದಿಗೆ ಕೃಷಿಯ ಪ್ರಗತಿಗೆ ಒತ್ತು ಕೊಟ್ಟು , ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ರಚನಾತ್ಮಕ ಯೋಜನೆಯಮುಖಾಂತರ, ಎಲ್ಲ ಪದವಿಧರರು ತಮ್ಮನ್ನು ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಬೇಕೆಂಬ ಹಂಬಲದ ಹೆಜ್ಜೆಯೊಂದಿಗೆ ಹೋರಾಟಮಾಡುವುದು.
5. ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರತವಾದ ಅನೇಕ ಪದವೀಧರ ಶಿಕ್ಷಕರು ಪಡೆಯುತ್ತಿರುವ ಅನುದಾನದ ವೇತನ ಬದಲಾಗಿ ಹಕ್ಕಿನ ವೇತನ ಪಡೆಯುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ, ಹಳೆ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವುದರ ಬಗ್ಗೆ ಧ್ವನಿಯೆತ್ತುವುದು.
6. ವೈದ್ಯರುಗಳಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲು ಮತ್ತು ವಕೀಲರುಗಳಿಗೆ ಆಫೀಸುಗಳಲ್ಲಿ ಪೀಠೋಪಕರಣ ಹಾಗೂ ಕಾನೂನು ಪುಸ್ತಕಗಳನ್ನು ಕೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ ವಿಧಾನಪರಿಷತ್ತಿನಲ್ಲಿ ಧ್ವನಿಯೆತ್ತುವುದು.
7. ಹೊಸದಾಗಿ ವಕೀಲ ವೃತ್ತಿ ಪ್ರಾರಂಭಿಸುವ ವಕೀಲರುಗಳಿಗೆ 5 ವರ್ಷದವರಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಮಾಸಿಕ ಭತ್ತೆ ಕೊಡಬೇಕೆಂದು ವಿಧಾನಪರಿಷತ್ತಿನಲ್ಲಿ ಧ್ವನಿಯೆತ್ತುವುದು.
8. ಎಲ್ಲಾ ಕ್ಷೇತ್ರದ ನೌಕರರುಗಳಿಗೆ, ವಕೀಲರು ಗಳಿಗೆ, ಪೊಲೀಸ್ ಇಲಾಖೆಯವರಿಗೆ ಜಿಲ್ಲಾಕೇಂದ್ರಗಳಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಹೊಂದಲು ಹಾಗೂ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ ಪರಿಷತ್ತಿನ ಮುಖಾಂತರ ಹೋರಾಟ ಮಾಡುವುದು .
9. ಮಹಿಳಾ ಪದವಿಧರೆ ಸಹೋದರಿಯರಿಗೆ ಎಲ್ಲಾ ಸಂವಿಧಾನಾತ್ಮಕ ಸಂಘ ಸಂಸ್ಥೆಗಳಲ್ಲಿ 50% (ಪರ್ಸೆಂಟ್) ಮೀಸಲಾತಿ ನಿಯಮ ಜಾರಿಗೆ ಬರಲೇಬೇಕೆಂದು ಅಚಲ ನಿರ್ಧಾರದೊಂದಿಗೆ ಹೋರಾಡುವುದು.
ಇಂತಹ ಅನೇಕ ವಿಚಾರಗಳೊಂದಿಗೆ ಆರೋಗ್ಯವೇ ಭಾಗ್ಯ ಯಾವ ಹೊತ್ತಿನಲ್ಲಿ ಏನಾದರೂ ಆರೋಗ್ಯಕ್ಕೆ ಧಕ್ಕೆ ಉಂಟಾದಾಗ ದುಬಾರಿ ವೈದ್ಯಕೀಯ ವ್ಯಾಚಗಳನ್ನು ನೀಗಿಸಿಕೊಳ್ಳಲು ತಮಿಳುನಾಡು ಸರ್ಕಾರ ಮಾದರಿಯಂತೆ ಮಾದರಿಯಂತೆ 5 ಲಕ್ಷ ವರೆಗೆ “ಮುಖ್ಯಮಂತ್ರಿಗಳ ಸಮಗ್ರ ವಿಮಾಯೋಜನೆ” ಸಿಗಬೇಕೆಂದು, ತಮ್ಮೆಲ್ಲರ ಧ್ವನಿಯಾಗಿ ವಿಧಾನಪರಿಷತ್ತಿನಲ್ಲಿ ಹಕ್ಕೊತ್ತಾಯ ಮಾಡಿ ಎಲ್ಲವುಗಳು ಜಾರಿಗೆ ಬರಲು ಪರಿಷತ್ತಿನ ಒಳಗೂ-ಹೊರಗೂ ಹೋರಾಟ ಮಾಡಿ ಯಶಸ್ವಿಯಾಗುವ ಹಂಬಲದೊಂದಿಗೆ ಶ್ರೀ ಆರ್ ಆರ್ ಪಾಟೀಲರು ಸ್ಪರ್ಧೆಗೆ ಇಳಿದಿದ್ದು, “ಎಲ್ಲ ಪದವೀಧರ ಮತದಾರರೇ ನನ್ನ ಹೈಕಮಾಂಡ್, ಅವರ ತೀರ್ಮಾನವೇ ಅಂತಿಮ” ಅಂತ ಅರಿತು ಕೊಂಡು,ಅನೇಕ ಪ್ರಗತಿಪರ ವಿಚಾರಗಳನ್ನು ಮತ್ತು ಭಾರತೀಯ ಜಾಗೃತ ಮತದಾರ ವೇದಿಕೆಯ ಚಿಂತನೆಗಳನ್ನು ಇಟ್ಟುಕೊಂಡು ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಗಾಳಿ ಬೀಸಲೇಬೇಕೆಂದುಕೊಂಡಿದ್ದಾರೆ, ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಆಶ್ಚರ್ಯ ಫಲಿತಾಂಶ ಹೊರಬೀಳಲು ಶ್ರೀ ಆರ್ ಆರ್ ಪಾಟೀಲ್ ಅವರಿಗೆ ತಮ್ಮ ಅತ್ಯಮೂಲ್ಯವಾದ ಪ್ರಥಮ( 1 ನೇ) ಪ್ರಾಶಸ್ತ್ಯದ ಮತವನ್ನು ಕ್ರಮಸಂಖ್ಯೆ 10 ಕ್ಕೆ ಮತ ಕೊಟ್ಟು ಎಲ್ಲರ ಒಳಿತಿಗಾಗಿ ಇಟ್ಟುಕೊಂಡ ಹೋರಾಟವು ಯಶಸ್ವಿ ಆಗಲೆಂದು ಶ್ರೀ ಆರ್ ಆರ್ ಪಾಟೀಲ್ ಮತ್ತು ಜಾಗೃತ ಮತದಾರರ ವೇದಿಕೆಯ ಮುಖಾಂತರ ಕಳಕಳಿಯ ವಿನಂತಿ🙏.